ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಡಿವೈನ್ ಪ್ರೊವಿಡೆನ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ರೋಶನಿ ತೇಜಸ್ವಿ ಎಸ್ಎಸ್ಎಲ್ ಸಿಯಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ.
625ಕ್ಕೆ 622 (ಶೇ.99.55) ಅಂಕ ಪಡೆದಿರುವ ತೇಜಸ್ವಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾಳೆ.
ರೋಶನಿ ಖ್ಯಾತ ನೇತ್ರ ತಜ್ಞ ಡಾ.ಟಿ.ಎಸ್.ತೇಜಸ್ವಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರಾಜಿ ತೇಜಸ್ವಿ ಅವರ ಪುತ್ರಿ.
ರೋಶನಿ ರಾಷ್ಟ್ರ ಮಟ್ಟದ ಚೆಸ್ ಆಟಗಾರ್ತಿಯಾಗಿ, ಆದರ್ಶ ವಿದ್ಯಾರ್ಥಿನಿಯಾಗಿ, ಡಿಪಿ ಶಾಲೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಳು. ಖ್ಯಾತ ನಿವೃತ್ತ ಸರ್ಜನ್ ಡಾ.ಟಿ.ಎಲ್.ಶ್ರೀನಿವಾಸ ಅವರ ಮೊಮ್ಮಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ