Belagavi NewsBelgaum NewsKarnataka NewsLatest

*BREAKING: ಹಿರೇಬಾಗೇವಾಡಿ ಘಾಟ್ ನಲ್ಲಿ ಭೀಕರ ಅಪಘಾತ: ಓರ್ವ ಸಾವು*

ಪ್ರಗತಿವಾಹಿನಿ ಸುದ್ದಿ: ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಂದು ನಸುಕಿನ ಜಾವ ಸುಮಾರು 1 ಗಂಟೆಗೆ ಹಿರೇಬಾಗೇವಾಡಿ ಘಾಟ್ ನಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾರೆ. ಲಾರಿಯಲ್ಲಿ 800 ಚಿಲ ಈರುಳ್ಳಿಗಳಿದ್ದವು. ಅಪಘಾತದಿಂದಾಗಿ ಈರುಳ್ಳಿಗಳು ರಸ್ತೆಪಾಲಾಗಿವೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ರಸ್ತೆಯಲ್ಲಿ ಎರಡು ಮೂರು ವಾಹನಗಳು ಪಲ್ಟಿಯಾಗಿದ್ದು, ಸ್ಥಳಕ್ಕಾಗಮಿಸಿದ ಬೆಳಗಾವಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳ ಜೊತೆ ಸೇರಿ ಇಡಿ ರಸ್ತೆಯನ್ನೆಲ್ಲ ಗುಡಿಸಿ, ಸಂಭವಿಸಲಿದ್ದ ಹೆಚ್ಚಿನ ಅನಾಹುತಗಳನ್ನ ತಡೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button