Latest

ಬೆಳಗಾವಿ ಪೊಲೀಸ್ ಕಮೀಷನರ್ ಹಠಾತ್ ಬದಲಾವಣೆ

 

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಅವರನ್ನು ಹಠಾತ್ ವರ್ಗಾವಣೆ ಮಾಡಲಾಗಿದ್ದು, ಪಿ.ರಾಜೇಂದ್ರ ಪ್ರಸಾದ ನೂತನ ಪೊಲೀಸ್ ಆಯುಕ್ತರಾಗಿ ಆಗಮಿಸಲಿದ್ದಾರೆ.

Home add -Advt

ರಾಜೇಂದ್ರ ಪ್ರಸಾದ ಬೆಂಗಳೂರಿನಲ್ಲಿ ವೈರಲೆಸ್ ವಿಭಾಗದ ಎಸ್ಪಿಯಾಗಿದ್ದರು. ಈ ಹಿಂದೆ ಅವರು ಬೆಳಗಾವಿಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ರಾಜಪ್ಪ ಅವರಿಗೆ ಜಾಗ ತೋರಿಸಲಾಗಿಲ್ಲ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನಾಗಿ ಬಿ.ಎಸ್.ಲೋಕೇಶ್ ಕುಮಾರ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಕೆ.ಟಿ.ಬಾಲಕೃಷ್ಣ ಮೈಸೂರು ಪೊಲೀಸ್ ಕಮಿಷನರ್ ಆಗಿ, ಆರ್.ರಮೇಶ್ ಬೆಂಗಳೂರು ಯೋಜನೆ ವಿಭಾಗದ ಡಿಐಜಿ ಆಗಿ ವರ್ಗಾವಣೆಗೊಂಡಿದ್ದಾರೆ. 

Related Articles

Back to top button