Latest

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಳಿದಿರುವ 64 ಅಭ್ಯರ್ಥಿಗಳ ವಿವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಏ.23ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ 64 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅವರ ವಿವರ ಈ ಲಿಂಕ್ ನಲ್ಲಿದೆ :  form-4 kannada

ನಾಮಪತ್ರ ಪರಿಶೀಲನೆಯ ನಂತರ 6 ಜನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ 58 ಜನ ಪಕ್ಷೇತರರು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಏ.8 ಅಂತಿಮ ದಿನವಾಗಿದ್ದು, ಅಂದು ಅಂತಿಮ ಕಣದ ಚಿತ್ರಣ ಸಿಗಲಿದೆ.

ಬಿಜೆಪಿಯ ಸುರೇಶ ಅಂಗಡಿ, ಬಹುಜನ ಸಮಾಜ ಪಾರ್ಟಿಯ ಬದ್ರುದ್ದೀನ ಕಮದೋಡ, ಇಂಡಿಯನ್ ನ್ಯಾಶನಲ್ ಪಾರ್ಟಿಯ ವಿರೂಪಾಕ್ಷಪ್ಪ ಸಾಧುನವರ್, ಸರ್ವ ಜನತಾ ಪಾರ್ಟಿಯ ಅಶೋಕ ಹಣಜಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ದಿಲಶಾದ್ ತಹಸಿಲ್ದಾರ, ಉತ್ತಮ ಪ್ರಜಾಕೀಯ ಪಾರ್ಟಿಯ ಮಂಜುನಾಥ ರಾಜಪ್ಪನವರ್ ರಾಜಕೀಯ ಪಕ್ಷಗಳ ಉಮೇದುವಾರರು.

Home add -Advt

ಕಣದಲ್ಲಿ ಮೂವರು ಪಕ್ಷತರರು ಸೇರಿದಂತೆ ನಾಲ್ವರು ಮಹಿಳೆಯರಿದ್ದಾರೆ.

64 ಜನರೂ ಕಣದಲ್ಲಿ ಉಳಿದರೆ ಪ್ರತಿ ಬೂತ್ ಗೆ 4 ಎಲೆಕ್ಟ್ರಾನಿಕ್ ಮತ ಯಂತ್ರಗಳು ಬೇಕಾಗುತ್ತವೆ. ಮತದಾನ ನಿಧಾನವಾಗಿ ನಡೆಯಲಿದೆ.

ಪಕ್ಷೇತರರಲ್ಲಿ ಹೆಚ್ಚಿನವರು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಚೋದನೆಯಿಂದ ನಿಂತವರು. ಗಡಿ ವಿವಾದದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಎಂಇಎಸ್ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿತ್ತು. ಆದರೆ, ಮುಳುಗುತ್ತಿರುವ ಸಮಿತಿಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ.

Related Articles

Back to top button