ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿದಾಸರಿಂದ ದಾಸವಾಣಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾಗ್ಯನಗರದ ರಾಮನಾಥ ಮಂಗಲ ಕಾರ‍್ಯಾಲಯದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಹರಿದಾಸ ಹಬ್ಬದ ಸಮಾರೋಪ ಸಮಾರಂಭ ಭಾನುವಾರ ಜರುಗಲಿದೆ.
ಮಧ್ಯಾಹ್ನ 3 ಗಂಟೆಗೆ ಚಿದಂಬರನಗರದ ಲಕ್ಷ್ಮೀ ಶೋಭಾನ ಭಜನಾ ಮಂಡಳ, ಟಿಳಕವಾಡಿಯ ಮಧ್ವಮಾಧವ ಭಜನಾ ಮಂಡಳ, ಟಿಳಕವಾಡಿಯ ಶ್ರೀ ವೇಣುಗೋಪಾಲ ಭಜನಾ ಮಂಡಳ ಹಾಗೂ ಕಾಕತಿಯ ಶ್ರೀ ರಾಘವೇಂದ್ರ ಭಜನಾ ಮಂಡಳಿಗಳಿಂದ ಭಜನೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ, ಪಂ. ಪಾಂಡುರಂಗಾಚಾರ್ಯ ಪೂಜಾರ ಇವರಿಂದ ಉಪನ್ಯಾಸ, ಶ್ರೀಪಾದಂಗಳವರಿಂದ ಅಮೃತೋಪದೇಶ ನಡೆಯಲಿದೆ.
ಸಾಯಂಕಾಲ ೭ ಗಂಟೆಗೆ ಹಲವಾರು ದಾಸವಾಣಿಗಳನ್ನು ನೀಡಿ ಮನೆಮಾತಾಗಿರುವ ಜನಪ್ರಿಯ ಗಾಯಕ ಡಾ. ರಾಯಚೂರು ಶೇಷಗಿರಿದಾಸ ಇವರಿಂದ ದಾಸವಾಣಿ ಕಾರ‍್ಯಕ್ರಮ ನಡೆಯುವುದು.
ಸಮಾರೋಪ ಸಮಾರಂಭದ ಅತಿಥಿಗಳಾಗಿ ನೀರಾವರಿ ಇಲಾಖೆ ಅಭಿಯಂತರರಾದ ಮೈಸೂರಿನ ಪ್ರಸನ್ನಮೂರ್ತಿ ಹಾಗೂ ನಿವೃತ್ತ ಪೋಲಿಸ್ ಆಯುಕ್ತ ಕೃಷ್ಣ ಭಟ್ ಅವರು ಆಗಮಿಸಲಿದ್ದು ಮುರಳಿಧರ ಕುಲಕರ್ಣಿ ನಿರೂಪಿಸಲಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮನಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ