ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ(ಆರ್‍ಎಲ್‍ಎಸ್)ದ ವಿದ್ಯಾರ್ಥಿ ಮಲ್ಲಿಕ್ ಮುಲ್ಲಾ ಈ ಸಲದ ದ್ವಿತೀಯ ಪಿಯುಸಿ ಪರೀಕ್ಷೆಯ ಭೌತಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾನೆ. ಇಡೀ ಬೆಳಗಾವಿ ಜಿಲ್ಲೆಯಲ್ಲಿ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿ ಎಂಬ ಹಿರಿಮೆಗೆ ಈತ ಪಾತ್ರನಾಗಿದ್ದಾನೆ.
ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿದ ಮಲ್ಲಿಕ್ ಮುಲ್ಲಾ, ನನ್ನ ಯಶಸ್ಸಿಗೆ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವರ್ಗ ಹಾಗೂ ಆರ್‍ಎಲ್‍ಎಸ್ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಸ್.ವಿ. ದಳವಾಯಿ ಅವರ ಸೂಕ್ತ ಮಾರ್ಗದರ್ಶನ ಕಾರಣ ಎಂದಿದ್ದಾನೆ. ವಿದ್ಯಾರ್ಥಿಗೆ ಪ್ರಾಧ್ಯಾಪಕರು ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಪಿಯುಸಿ ಬೋರ್ಡ್‍ನ ಮಾಹಿತಿಯಂತೆ ಇಡೀ ರಾಜ್ಯದಲ್ಲಿ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು ಇಂತಹ ಸಾಧನೆ ಮಾಡಿದ್ದಾರೆ. ಈ ಏಳು ವಿದ್ಯಾರ್ಥಿಗಳ ಪೈಕಿ ಈತ ಒಬ್ಬನಾಗಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ