Belagavi NewsBelgaum NewsCrimeKannada NewsKarnataka News

*ನಿಯಂತ್ರಣ ತಪ್ಪಿ ಹೊಲದಲ್ಲಿ ಬಿದ್ದ ಬೈಕ್: ಸವಾರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿರುವ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿದ್ದು, ಹಿಂಬದಿ ಕುಳಿತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.‌

ರಾಮದುರ್ಗ ತಾಲೂಕಿನ ಆನೆಗುದ್ದಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಸಚಿನ್‌ ಸಿದ್ದಿಂಗಪ್ಪ ಗುಂಡಾಳೆ (28) ಎಂಬುವವರು ಮೃತ ಪಟ್ಟಿದ್ದಾರೆ. ಬೈಕ್ ಹಿಂಬದಿಗೆ ಕುಳಿತಿದ್ದ ಬಸಲಿಂಗಪ್ಪ ಮಹಾದೇವಪ್ಪ ಅಂಗಡಿ  ಎಂಬುವರಿಗೆ ಗಂಭಿರ ಗಾಯಗಳಾಗಿವೆ.‌

ಅಪಘಾತದ ಬಗ್ಗೆ ರಾಮದುರ್ಗ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button