ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಖಾನಾಪುರ ರಸ್ತೆಯ ಮಚ್ಛೆ ಬಳಿ ಬೈಕ್ -ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ನಾವಗೆಯ ಸಾತೇರಿ ನಿಂಗಪ್ಪ ಬೆಳಗಾಂವ್ಕರ್ (26), ನಾವಗೆಯ ರಾಹುಲ್ ದೇವಪ್ಪ ಗುರವ (22), ಮಂಡೋಳಿ ಶಿವಾಜಿ ಚೌಕ್ ನ ಮಂಗೇಶ ದಳವಿ (25) ಗಾಯಗೊಂಡಿದ್ದು, ಮತ್ತೋರ್ವನ ಹೆಸರು ಗೊತ್ತಾಗಿಲ್ಲ.
ಗಾಯಾಳುಗಳಲ್ಲಿ ಇಬ್ಬರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇನ್ನಿಬ್ಬರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗೇಶ ದಳವಿ ಮನೆ ಕಟ್ಟಿಸುತ್ತಿದ್ದು, ಮನೆಗಾಗಿ ಇಟ್ಟಂಗಿ ತರಲು ದೇಸೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ.
ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ