ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಪ್ರವಾಸೋದ್ಯಮ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಗಳ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳಿಗಾಗಿ 4 ದಿನಗಳ ಕರ್ನಾಟಕ ದರ್ಶನ -ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಣಿಪಾಲದಲ್ಲಿರುವ ಮ್ಯೂಜಿಯಂ ಆಫ್ ಅನಾಟಮಿ & ಪ್ಯಾಥಾಲಜಿಗೆ ಭೇಟಿ ನೀಡಿ ಅಂಗರಚನಾಶಾಸ್ರ್ತ ಹಾಗೂ ರೋಗಲಕ್ಷಣಾ ಶಾಸ್ತ್ರ ಕುರಿತು ಮಾಹಿತಿ ಪಡೆದರು. ನ್ಶೆಜ ಅಂಗಾಂಗಗಳ ಭಾಗಗಳನ್ನು ವಿಕ್ಷಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿಪಟ್ಟರು.
ಐತಿಹಾಸಿಕ ಸ್ಥಳಗಳಿಗೆ , ದಾಂಡೆಲಿ ಇಕೋ ಗಾರ್ಡನ್, ಗೊಕರ್ಣ, ಮುರ್ಡೆಶ್ವರ, ಧರ್ಮಸ್ಥಳ ಹಾಗೂ ಕಾರ್ಕಳ ಇತ್ಯಾದಿ ಪೌರಾಣಿಕ ಸ್ಥಳಗಳಿಗೆ ಭೇಟಿ ನೀಡಿ ಶಿಲ್ಪಕಲೆ ಕುರಿತು ವಿದ್ಯಾರ್ಥಿಗಳು ಪ್ರತ್ಯಕ್ಷ ಜ್ಞಾನ ಪಡೆದರು. ಈ ಸಂದರ್ಭದಲ್ಲಿ ಆಯಾ ಸ್ಥಳಗಳಲ್ಲಿ ಆಶುಭಾಷಣ, ಚಿತ್ರಕಲೆ, ಗಾಯನ, ಸಮೂಹ ಗಾಯನ, ನೃತ್ಯ, ಕ್ವಿಜ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ನೋಡಲ್ ಅಧಿಕಾರಿ ಸಿ. ಎ. ಜೈನಾಪುರೆ, ಸಿ. ಆರ್. ತಡಕೋಡ, ಸಿ. ಜಿ. ಗವಾಳಕರ, ಎಮ್. ಎಸ್. ಹೊಳಿ, ಕುಲಕರ್ಣಿ ಹಾಗೂ ಶಿವಪ್ಪನವರ ಪ್ರವಾಸದಲ್ಲಿ ಭಾಗವಹಿಸಿದ್ದರು. ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಅತ್ಯಂತ ಯಶಸ್ವಿಯಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಬರಗೇರ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ