Latest

*ಮದುವೆ ಸಮಾರಂಭಕ್ಕೆಂದು ಹೋದ ನಾಲ್ವರು ಯುವಕರು ನೀರುಪಾಲು*: *ಓರ್ವನ ಶವ ಪತ್ತೆ*

ಮದುವೆ ಸಮಾರಂಭಕ್ಕೆಂದು ಹೋದವರು ನದಿಯಲ್ಲಿ ಆಟವಾಡಲು ಹೋಗಿ ನಾಲ್ವರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ.

ಗೂಗಲ್ ಸರ್ಜ್ ಮಾಡಿ ತುಂಗಾ ನದಿಗೆ ತೆರಳಿದ್ದ ನಾಲ್ವರು ಯುವಕರು ನೀರುಪಾಲಾಗಿದ್ದಾರೆ. ಅವರಲ್ಲಿ ಓರ್ವನ ಶವ ಪತ್ತೆಯಾಗಿದೆ. ಉಳಿದವರುಗಾಗಿ ಶೋಧಕಾರ್ಯ ಮುಂದುವರೆದಿದೆ.

ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ನೀರುಪಾಲಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಈ ದುರಂತ ಸಂಭವಿಸಿದೆ.

ಬೆಂಗಳೂರು ಮೂಲದ ಕಾರ್ತಿಕ್(31), ನಕುಲ್(19), ಪವನ್(30), ಚೇತನ್ (19) ನೀರುಪಾಲಾದವರು. ನದಿಗೆ ಬಿದ್ದಿದ್ದ ಓರ್ವನನ್ನ ರಕ್ಷಿಸಲು ಹೋಗಿ ಮೂವರು ಸಹ ಮುಳುಗಿದ್ದಾರೆ. ಈ ನಾಲ್ವರ ಪೈಕಿ ಓರ್ವನ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಸ್ಥಳಕ್ಕೆ ಮಾಳೂರು ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Related Articles

Back to top button