ಪ್ರಗತಿವಾಹಿನಿ ಸುದ್ದಿ, ಮಾರಿಹಾಳ
ಮಾರಿಹಾಳದಲ್ಲಿ ಭಾನುವಾರ ನಡೆದಿದ್ದ ಡಬಲ್ ಮರ್ಡರ್ ಪ್ರಕರಣವನ್ನು ಕೇವಲ 48 ಗಂಟೆಯಲ್ಲಿ ಭೇದಿಸುವಲ್ಲಿ ಮಾರಿಹಾಳ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮೂವರನ್ನು ಬಂಧಿಸಿದ್ದಾರೆ.
ಮಾರಿಹಾಳದ ಶಿವಾನಂದ ಭೀಮಪ್ಪ ಕರವಿನಕೊಪ್ಪ (23), ಮಹೇಶ ಬಸವರಾಜ ನಗಾರಿ (20), ನಿಂಗಪ್ಪ ಬಸಪ್ಪ ಬಳ್ಳೋಡಿ (27) ಬಂಧಿತರು. ಇವರನ್ನು ಸುಳೇಬಾವಿ ರೈಲ್ವೆ ಸ್ಟೇಶನ್ ನಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು
ಮಾರಿಹಾಳ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ರೆಪ್ಪ ಮಲ್ಲಪ್ಪ ಮಲ್ಲೆನ್ನವರ್ (40) ಹಾಗೂ ಬಸನಗೌಡ ಸೋಮರೆಡ್ಡಿ ಪಾಟೀಲ ( 24) ಎನ್ನುವವರನ್ನು ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನಜಾವದ ಮಧ್ಯದಲ್ಲಿ ಕೊಲೆ ಮಾಡಲಾಗಿತ್ತು.
ಮಾರಿಹಾಳ ಠಾಣೆಯ ಇನ್ಸ್ಪೆಕ್ಟರ್ ವಿಜಯಕುಮಾರ ಎಸ್.ಸಿನ್ನೂರ ಹಾಗೂ ಸಿಸಿಐಬಿ ಪಿಐ ಸಂಜೀವ ಕಾಂಬಳೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಮಾರಿಹಾಳ ಠಾಣೆಯ ಎಎಸ್ಐ ಪಿ.ಕೆ.ಪರಸನ್ನವರ್, ಬಿ.ಎಸ್.ನಾಯಿಕ, ಬಿ.ಬಿ.ಕಡ್ಡಿ, ಎಂ.ಬಿ.ಬಡಿಗೇರ, ಎಚ್.ಎಲ್.ಯರಗುದ್ರಿ, ಎಂ.ಆರ್.ಸುಲದಾಳ, ಎ.ಎಂ.ಜಮಖಂಡಿ, ಎಂ.ಎಸ್.ಹಿರೇಮಠ, ಎಂ.ಎಲ್.ಬೊಮ್ಮನಾಳ, ಸಿಸಿಐಬಿಯ ಎಂ.ಎಂ.ಒಡೆಯರ್, ಬಿ.ಎಂ.ಬಳಗಣ್ಣವರ್, ಎ.ಕೆ.ಕಾಂಬಳೆ, ಎಸ್.ಆರ್.ಮೇತ್ರಿ, ಆರ್.ಎಸ್.ನಾಯಕವಾಡಿ, ಎಸ್.ಸಿ.ಕೋರೆ, ಬೆಳಗಾವಿ ಎಸಿಪಿ ಕಾರ್ಯಾಲಯದ ಎಂ.ವಿ.ತಳವಾರ, ಎಂ.ಬಿ.ಕೊಟಬಾಗಿ ಹಾಗೂ ತಾಂತ್ರಿಕ ವಿಭಾಗದ ಆರ್.ಎಸ್.ಅಕ್ಕಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಕಮಿಶನರ್ ಡಿ.ಸಿ.ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ್, ಮಹಾನಿಂಗ ನಂದಗಾವಿ ಹಾಗೂ ಎಸಿಪಿ ಬಾಲಚಂದ್ರ ಬಿ.ಎಸ್. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ