Latest

ಮಾರುತಿ ಭಂಡಾರೆಗೆ ಚರ್ಮಶ್ರೀ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲೆದರ್ ಆರ್ಟಿಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಪ್ರತಿಷ್ಠಿತ ’ಚರ್ಮಶ್ರೀ’ ಪ್ರಶಸ್ತಿಗೆ ಮಾರುತಿ ಭಂಡಾರೆ ಅವರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಆಯ್ಕೆ ಸಮಿತಿ ಭಂಡಾರೆ ಹೆಸರನ್ನು ಪ್ರಕಟಿಸಿದೆ.
ಮಾ.24ರಂದು ಸಾಯಂಕಾಲ 5 ಗಂಟೆಗೆ ಶಹಪುರದ ನಾಥಪೈ ಸರ್ಕಲ್ ಹತ್ತಿರ ಸರಸ್ವತಿ ರಸ್ತೆಯಲ್ಲಿರುವ ಲೋಕಪ್ರಿಯ ಜನಸೇವಾ ಸಂಸ್ಥೆಯ ಆವರಣದಲ್ಲಿ ನಡೆಯುವ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ’ಚರ್ಮಶ್ರೀ’ ಪ್ರಶಸ್ತಿ ಪ್ರಧಾನಮಾಡಲಾಗುವುದು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಾ ಮದಭಾವಿ ಗ್ರಾಮದ ಮಾರುತಿ ರಾ. ಭಂಡಾರೆ ಇವರು  1952ರಲ್ಲಿ ಜನಸಿದರು. ಚಿಕ್ಕ ವಯಸ್ಸಿನಿಂದ ಚರ್ಮಕಾರ ವೃತ್ತಿ ಮಾಡಿ ಸಂಪಾದಿಸಿದ ಹಣದಿಂದ ತಮ್ಮ ಶಿಕ್ಷಣ ಎಂ. ಎ. ಪದವಿ ಪಡೆದು ಸರ್ಕಾರಿ ಸೇವೆ ಸಲ್ಲಿಸುತ್ತ ತಮ್ಮ ಕುಲಕಸುಬಾದ ಚರ್ಮಕಾರ ಉದ್ಯೋಗದಲ್ಲಿ ತೊಡಗಿಸಿಕೊಂಡರು. ಬೆಂಗಳೂರು ಮತ್ತು ಸುತ್ತ ಮುತ್ತಲಿನ ರಾಜ್ಯಗಳಲ್ಲಿ ಕೊಲ್ಲಾಪುರಿ ಚಪ್ಪಲಿಗಳನ್ನು ಸುಮಾರು ತಿಂಗಳಿಗೆ ಐದು ಸಾವಿರ ಜೊತೆ ಮಾರಾಟ ಮಡುವುದರೊಂದಿಗೆ 150 ಬಡಕುಶಲಕರ್ಮಿಗಳಿಗೆ ಉದ್ಯೋಗ ಅವಕಾಶವನ್ನೊದಗಿಸಿಕೊಟ್ಟರು.
ಬಂಟು ಮತ್ತು ಬೂಟು, ಕೊಲ್ಲಾಪುರ ಚಪ್ಪಲಿಯ ಮಾದರಿಯಲ್ಲಿ ತಯಾರಿಸಿ ಜಗತ್ ಪ್ರಸಿದ್ಧ ಮಾಡಿದರು. ಇದರಿಂದ ನೂತನ ವಿನ್ಯಾಸದ ಕಾರಣಿಬೂತರಾದರು. 2005 ರಲ್ಲಿ ಈ ವಿನ್ಯಾಸದ ಚಪ್ಪಲಿಗೆ ರಾಷ್ಟ್ರಪತಿ ಡಾ. ಎ.ಪಿ. ಜೆ ಅಬ್ದುಲ ಕಲಾಂರಿಂದ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾರತಿ ಭಂಡಾರೆ ಇವರ ಸತತ ಪ್ರಯತ್ನದಿಂದ ಕೊಲ್ಲಾಪುರಿ ಚಪ್ಪಲಿ ಮೇಲಿನ ವ್ಯಾಟ್ ತೆರಿಗೆ ವಿನಾಯತಿ ಪಡೆಯಲು ಪ್ರಮುಖ ಕಾರಣರಾದರು. ಮಾರುತಿ ಭಂಡಾರೆ ಇವರು 1981ರಲ್ಲಿ ಅಖಿಲ ಕರ್ನಾಟಕ ಸಮಗಾರ ಹರಳಯ್ಯ ಸಮಾಜ ಸೇವಾ ಸಂಘ ಸ್ಥಾಪಿಸಿ ಆ ಸಂಸ್ಥೆಯ ಖಜಾಂಚಿಯಾಗಿ 24 ವರ್ಷ ಸೇವೆ ಸಲ್ಲಿಸಿ ಸಮಾಜದ ಏಕತೆಗಾಗಿ ಶ್ರಮಿಸಿದರು. ಇವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಯೋಗಶಿಬೀರ ಕಾರ‍್ಯ, ಸಮಾಜದಲ್ಲಿ ಮಾರ್ಗದರ್ಶನ ಹಾಗೂ ಹೋಮ ಹವನ ಇತ್ಯಾದಿಗಳ ಸೇವೆಗಳನ್ನು ಪರಿಗಣಿಸಿ ವಿವಿಧ ಅಂತರಾಷ್ಟ್ರೀಯ ಮತ್ತು ಭಾರತೀಯ ಸಂಘ ಸಂಸ್ಥೆಗಳು ಇವರಿಗೆ ಹತ್ತು ಹಲವಾರು ಪುರಸ್ಕಾರ ಮತ್ತು ಪದವಿ ಪ್ರದಾನ ಮಾಡಿ ಗೌರವಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button