ಬ್ರಿಟಿಷ್, ಮುಸ್ಲಿಂ ರಿಗಿಂತ ಕಾಂಗ್ರೆಸ್ ಹೆಚ್ಚು ಲೂಟಿ ಮಾಡಿದೆ -ಅನಂತಕುಮಾರ ಹೆಗಡೆ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ಕಾಂಗ್ರೆಸ್ ಮುಕ್ತ ಭಾರತ ಮಾಡುವುದರ ಜೊತೆಗೆ, ಕಾಂಗ್ರೆಸ್ ಮುಕ್ತ ಉತ್ತರ ಕನ್ನಡ ಮಾಡುತ್ತಿದ್ದೇವೆ ಎಂದು ಕೆಂದ್ರ ಸಚಿವ ಅನಂತ ಕುಮಾರ ಹೆಗಡೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಬಾರಿ ಗಟ್ಟಿಯಾಗಿತ್ತು, ಆದರೆ ಈ ಭಾರಿ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ನಾವು ಉಸಿರಾಡಲು ಕೊಡುವುದಿಲ್ಲ, ಈ ಚುಣಾವಣೆಯಲ್ಲಿ ನಾವು ಕಾಂಗ್ರೆಸ್ ಮುಕ್ತ ಮಾಡಿದ್ದೇ ಆದ್ರೆ ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಮುಕ್ತ ಕರ್ನಾಟಕ ವನ್ನ ಮಾಡಬೇಕಿದೆ.
ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು, ಮುಸ್ಲಿಂ ಹಾಗೂ ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸ್ ಪಕ್ಷದವರು. ಭಾರತಕ್ಕೆ ಸ್ವಾತಂತ್ರ ಸಿಕ್ಕ ಬಳಿಕ ಕಾಂಗ್ರೆಸ್ ಸರಿಯಾದ ಆಡಳಿತ ನಡೆಸಿಲ್ಲ, ಕಾಂಗ್ರೆಸ್ 70 ವರ್ಷದಲ್ಲಿ 6 ಕೋಟಿ ಸಿಲಿಂಡರ್ ಕೊಟ್ಟಿದೆ. ಆದರೆ ಮೋದಿ ಸರಕಾರ 5 ವರ್ಷದಲ್ಲಿ 9 ವರೆ ಕೋಟಿ ಸಿಲಿಂಡರ ಕೊಟ್ಟಿದ್ದೇವೆ ಎಂದು ಹೇಳಿದರು.
ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿದರು. ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ಉಪಾಧ್ಯಕ್ಷ ಗೋಪಾಲ ಹುಕ್ಕೇರಿ, ಬಸವರಾಜ ಪರವಣ್ಣವರ, ಸಂದೀಪ ದೇಶಪಾಡೆ, ಉಳವಪ್ಪ ಉಳ್ಳೆಗಡ್ಡಿ, ಶ್ರೀಕರ ಕುಲಕರ್ಣಿ, ಚನ್ನಯ್ಯ ಪಲಕ್ಷೀವಿ, ಚನ್ನಬಸಪ್ಪ ಮಲಶೆಟ್ಟಿ, ಕಿರಣ ಪಾಟೀಲ, ಗುರುಪಾದಪ್ಪ ಉಪ್ಪಿನ, ಈರಣ್ಣಾ ಬಡಿಗೇರ, ಮಹಾದೇವ ಹತ್ತಿ ಉಪಸ್ಥಿತರಿದ್ದರು.




