Latest

ಮುಕ್ತಿಮಠ ಬಳಿ ಕಾರು- ಲಾರಿ ಡಿಕ್ಕಿ , ನುಜ್ಜುಗುಜ್ಜಾದ ಕಾರು; ರಸ್ತೆಗೆ ಬಂದ ಮಾವು

ಪ್ರಗತಿವಾಹಿನಿ ಸುದ್ದಿ, ಅಗಸಗಿ:
ಬೆಳಗಾವಿ ತಾಲೂಕಿನ ಹೆದ್ದಾರಿಗೆ ಅಂಟಿಕೊಂಡಿರುವ ಮುಕ್ತಿಮಠ ಬಳಿ ಬೆಂಗಳೂರಿನ  ಕಡೆ ಹೋಗುತ್ತಿದ್ದ ಕಾರಿನ ಟಾಯರ್ ಬರ್ಸ್ಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ವಿಭಜಕದ ಮೇಲಿಂದ ಹಾರಿದ ಕಾರು  ಮಿರಜ್ ಕಡೆ ಮಾವು ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸರ್ವಿಸ್‌ ರಸ್ತೆ ಮೇಲೆ ಬಂದು ಬಿದ್ದಿದೆ.
ಇತ್ತ ಕಾರಿನ ಡಿಕ್ಕಿಗೆ ಆಯ ತಪ್ಪಿದ ಲಾರಿ ಕೂಡ ಹೆದ್ದಾರಿ ಕೆಳಗಡೆ ಉರುಳಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಮಾವಿನಕಾಯಿ ತುಂಬಿದ ಪೆಟ್ಟಿಗೆಗಳು ರಸ್ತೆ ಮೇಲೆ ಬಿದ್ದಿವೆ. ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಬೆಂಗಳೂರು ಮೂಲದವರಾಗಿದ್ದು, ಕಾರಿನಲ್ಲಿದ್ದ ಅಪಘಾತ ಪ್ರತಿರೋಧಕ ಸೌಲಭ್ಯವಾದ  ಬಲೂನಿನ ಸಹಾಯದಿಂದ ಪ್ರಾಣಾಯಾಮದಿಂದ ಪಾರಾಗಲು ಸಹಾಯವಾಗಿದೆ. 
ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ಸಾಗಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಕಾಕತಿ ಪಿ ಎಸ್ ಐ ಅರ್ಜುನ ಹಂಚಿನಿಮನಿ ತಿಳಿಸಿದ್ದಾರೆ. ಕಾಕತಿ ಪೋಲಿಸ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button