ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮೇ 25ರಂದು ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಹೊಗಾರ, ಗುರವ, ಜೀರ, ಪೊಜಾರ ಜಾತಿಯ ರಾಜ್ಯಮಟ್ಟದ ವಧು-ವರರ ಸಮಾವೇಶ ಆಯೋಜಿಸಲಾಗಿದೆ.
ಇಂದಿನ ಬಿಡುವಿಲ್ಲದ ದಿನದಲ್ಲಿ ಗಂಡು ಹೆಣ್ಣುಗಳು ಬೇರೆ ಬೇರೆ ಸ್ಥಳದಲ್ಲಿ ಸೇವೆ ಮಾಡುತ್ತಿದ್ದು ಪೋಷಕರು ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದು ಆಯ್ಕೆ ಕಷ್ಠವಾಗುತ್ತದೆ ಮತ್ತು ಅನೇಕ ಸ್ಥಳಗಳಿಗೆ ಓಡಾಡಿ ಸಮಯ ವ್ಯರ್ಥಮಾಡಿದರೂ ಸೂಕ್ತ ವಧು-ವರರು ಸಿಗುವುದಿಲ್ಲ. ಹಾಗಾಗಿ ಇಂಥಹ ವಧುವರರ ಸಮ್ಮೆಳನಗಳನದಲ್ಲಿ ಒಂದೆ ಸ್ಥಳದಲ್ಲಿ ಹಲವಾರು ವಧು ವರರು ಹಾಗು ಪೋಷಕರು ಸೇರುವುದರಿಂದ ಉತ್ತಮ ಜೀವನ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಉತ್ತಮ ವೇದಿಕೆಯಾಗಿದೆ ಎಂದು ಹೊಗಾರ, ಗುರವ, ಜೀರ, ಪೊಜಾರ ಜಾತಿಯ ಸೇವಾ ಸಂಘದ ಅಧ್ಯಕ್ಷ ಲಕ್ಷೀಕಾಂತ ಗೊರವ ಹೇಳಿದರು.
ಅವರು ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಮಟ್ಟದ ವಧುವರರ ಸಮಾವೇಶದ ಆಯೋಜನೆ ಕುರಿತು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು. ಹೊಗಾರ, ಗುರವ, ಜೀರ, ಪೊಜಾರ ಜಾತಿಯ ಜನರು ಒಂದೆ ಕೋಮಿಗೆ ಸೇರಿದವರಾಗಿದ್ದು ಅವರು ನೆಲೆಸಿರುವ ಪ್ರದೇಶ ಹಾಗೂ ಮಾಡುತ್ತಿರುವ ಕಸುಬನ್ನು ಆಧರಿಸಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಕರ್ನಾಟಕ, ಆಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಈ ಕೋಮಿನ ಜನರಿದ್ದಾರೆ ಎಂದು ಅವರು ಹೇಳಿದರು.
ಸಮಾವೇಶವು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ನಡೆಯುತ್ತದೆ. ಮಧ್ಯಾಹ್ನದ ನಂತರ ವಿಧವೆ, ವಿಧುರ ಹಾಗು ಎರಡನೆ ಸಂಬಂಧದ ಆಯ್ಕೆ ನಡೆಯಲಿದೆ. ರಾಜ್ಯದಿಂದ ಸುಮಾರು ೫೦೦ ವಧುವರರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಇದರಲ್ಲಿ ಭಾಗವಹಿಸಲು ಯಾವುದೆ ಪ್ರವೇಶಧನ ಇಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಹೂಗಾರ, ಮಹಾದೇವ ಹೂಗಾರ, ಡಾ.ಶಿವಯೋಗಿ ಹೂಗಾರ, ಬಸವರಾಜ ಹೂಗಾರ ಮತ್ತು ಮೋಹನ ಹೂಗಾರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ