ಪ್ರಗತಿವಾಹಿನಿ ಸುದ್ದಿ, ದೇವದುರ್ಗ
ಆಡಿಯೋ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಮಿಠಕಲ್ ಶಾಸಕ ನಾಗನಗೌಡರ ಪುತ್ರ ಶರಣಗೌಡ ಬುಧವಾರ ಸಂಜೆ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅಲ್ಲದೆ, ದೇವದುರ್ಗ ಶಾಸಕ ಶಿವನಗೌಡ ನಾಯಕ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಮತ್ತು ಮಾಜಿ ಪತ್ರಕರ್ತ ಮಂಕಲ್ ವಿರುದ್ಧ ಭ್ರಷ್ಠಾಚಾರ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಕೆಲ ಹೊತ್ತಿನಲ್ಲೇ ಯಡಿಯೂರಪ್ಪ ಮಾತನಾಡಿದ ಆಡಿಯೋ ರಿಲೀಸ್
ಕಳೆದ ಫೆ.7 ಮತ್ತು 8ರಂದು ನಡೆದ ಘಟನೆ ಕುರಿತು ಈ ದೂರು ದಾಖಲಿಸಲಾಗಿದೆ. 7ರ ರಾತ್ರಿ ದೂರವಾಣಿ ಕರೆ ಮಾಡಿ ತಮ್ಮನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಣದ ಆಮಿಶ ಒಡ್ಡಿದ್ದಲ್ಲದೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಕಲಂ 8, 12, ಐಪಿಸಿ ಸೆಕ್ಷನ 120 (ಬಿ) ಮತ್ತು 506ರ ಪ್ರಕಾರ ಶರಣಗೌಡ ಪ್ರಕರಣ ದಾಖಲಿಸಿದ್ದಾರೆ.
ಗುರುಮಿಠಕಲ್ ಶಾಸಕರ ಮಗನೊಂದಿಗೆ ಡೀಲ್ ಯತ್ನ: ಆಡಿಯೋ ರಿಲೀಸ್
ನನ್ನ ತಂದೆಯನ್ನು ರಾಜಿನಾಮೆ ಕೊಡಿಸಲು ಒಪ್ಪಿಸು. ನಿನ್ನನ್ನು ಶಾಸಕನನ್ನಾಗಿ ಮಾಡುತ್ತೇವೆ. ಚುನಾವಣೆ ಖರ್ಚು ವೆಚ್ಚವನ್ನೆಲ್ಲ ನೋಡಿಕೊಳ್ಳುತ್ತೇವೆ. ಜೊತೆಗೆ ಮುಂಗಡವಾಗಿ 10 ಕೋಟಿ ರೂ. ಕೊಡುತ್ತೇವೆ. ಕೂಡಲೇ ನೀನು ಮುಂಬೈಗೆ ಹೊರಡು ಎಂದು ಆಮಿಷ ಒಡ್ಡಿ ಭಯಭೀತರನ್ನಾಗಿ ಮಾಡಿದರು. ಲಂಚದ ಆಮಿಷ ಒಡ್ಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿಸಲು ಪ್ರಯತ್ನಿಸಿದರು. ನಾನು ಇಂತಹ ದುಷ್ಕೃತ್ಯ ಮಾಡುವುದಿಲ್ಲ ಎಂದಾಗ ನಿನ್ನ ತಂದೆಯ ರಾಜಕೀಯ ಜೀವನವನ್ನು ಮುಗಿಸುತ್ತೇವೆ ಎಂದು ಹೆದರಿಸಿದರು.
ಆಡಿಯೋ ಎಲ್ಲ ನಕಲಿ, ನಾನು ಯಾರೊಂದಿಗೂ ಮಾತನಾಡಿಲ್ಲ ಎಂದ ಯಡಿಯೂರಪ್ಪ
ಹಾಗಾಗಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.
50 ಕೋಟಿ ರೂ. ಆರೋಪ: ನೊಂದು ಕಣ್ಣೀರು ಹಾಕಿದ ಸ್ಪೀಕರ್
ಇದರಿಂದಾಗಿ ಆಡಿಯೋ ಪ್ರಕರಣ ಮತ್ತೊಂದು ದೊಡ್ಡ ತಿರುವು ಪಡೆದಂತಾಗಿದೆ. ಬುಧವಾರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3 ದಿನದಿಂದ ವಿಧಾನಸಭೆ ಕಲಾಪದಲ್ಲಿ ಕೋಲಾಹಲ ಉಂಟಾಗಿರುವುದು ಮತ್ತು ಹಾಸನದಲ್ಲಿ ಪ್ರೀತಂ ಗೌಡ ಮನೆಯ ಮೇಲೆ ದಾಳಿ ನಡೆದಿದ್ದನ್ನು ಉಲ್ಲಖಿಸಬಹುದು.
ಹಲವು ಕ್ಷಿಪ್ರ ಬೆಳವಣಿಗೆ ಕಂಡ ರಾಜ್ಯ ರಾಜಕೀಯ; ಕಲಾಪ ಮುಂದೂಡಿಕೆ
ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ