Kannada NewsKarnataka NewsNational

*ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಬೈಕ್ ಮೆಕ್ಯಾನಿಕ್*

ಪ್ರಗತಿವಾಹಿನಿ ಸುದ್ದಿ: ಮಂಡ್ಯದ ಬೈಕ್ ಮೆಕ್ಯಾನಿಕ್​ ಒಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದು, ಈ ವರ್ಷ ಕೇರಳದ ತಿರುವೋಣಂ ಬಂಪರ್ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿಯಾದ ಅಲ್ತಾಫ್ ಪಾಷಾ ಅವರು ಕೇರಳ‌ದ ತಿರುವೋಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದು ಬೀಗಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂಪಾಯಿ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ ಕೋಟಿ ಗೆದ್ದಿದ್ದಾರೆ.

ನಾನು ಸುಮಾರು 15 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ. ಅಂತಿಮವಾಗಿ ನಾನು ಗೆದ್ದಿದ್ದೇನೆ ಎಂದು ಅಲ್ತಾಫ್ ಗುರುವಾರ ವಯನಾಡಿನ ಕಲ್ಪೆಟ್ಟಾದಲ್ಲಿ ಪಿಟಿಐ ಜೊತೆ ಸಂತೋಷ ಹಂಚಿಕೊಂಡಿದ್ದಾರೆ. ಅಲ್ತಾಫ್ ಅವರು ತಮ್ಮ ಲಾಟರಿ ಟಿಕೆಟ್ ನ ಬಹುಮಾನ ಪಡೆಯಲು ಮತ್ತು ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ವಯನಾಡ್‌ಗೆ ತೆರಳಿದ್ದಾರೆ. ನಾನು ಸಾಮಾನ್ಯವಾಗಿ ಮೀನಂಗಡಿಯಲ್ಲಿ ವಾಸಿಸುವ ಬಾಲ್ಯದ ಗೆಳೆಯನನ್ನು ಭೇಟಿ ಮಾಡಲು ವಯನಾಡ್‌ಗೆ ಹೋಗುತ್ತಿದ್ದೆ ಮತ್ತು ಅವರನ್ನು ಭೇಟಿಯಾದಾಗಲೆಲ್ಲ ನಾನು ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ ಎಂದು ಅಲ್ತಾಫ್ ಹೇಳಿದ್ದಾರೆ.

ತಿರುವನಂತಪುರಂನ ಗೋರ್ಕಿ ಭವನದಲ್ಲಿ ಬುಧವಾರ ನಡೆದ ಡ್ರಾದಲ್ಲಿ, ವಯನಾಡಿನ ಪನಮರಮ್‌ನಲ್ಲಿರುವ ಎಸ್‌ಜೆ ಲಕ್ಕಿ ಸೆಂಟರ್ ಮಾರಾಟ ಮಾಡಿದ ವಿಜೇತ ಸಂಖ್ಯೆ, ಟಿಜಿ 43422 ಅನ್ನು ಆಯ್ಕೆ ಮಾಡಲಾಯಿತು. ಎಲ್ಲಾ ತೆರಿಗೆ ಕಡಿತದ ನಂತರ, ಬಂಪರ್ ಬಹುಮಾನ ವಿಜೇತರಿಗೆ ಕೈಗೆ ಸುಮಾರು 13 ಕೋಟಿ ರೂಪಾಯಿ ಸಿಗುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button