Latest

ರಾಹುಲ್ ಗೆ ಮುಳುವಾದ ಮಮತಾ ವಿರುದ್ಧದ ಹಳೆಯ ಟ್ವೀಟ್ ಗಳು!

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಪಶ್ಚಿಮಬಂಗಾಲದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತ ಹೊರಟಿರುವ ಶಾರದಾ ಚಿಟ್ ಫಂಡ್ ಹಗರಣ ಈಗ ರಾಷ್ಟ್ರ ರಾಜಕಾರದಲ್ಲೂ ಗದ್ದಲಕ್ಕೆ ಕಾರಣವಾಗಿದೆ. ತನಿಖೆ ನಡೆಸಲು ಹೋಗಿದ್ದ ಸಿಬಿಐ ಅಧಿಕಾರಿಗಳನ್ನು ಬಂಧಿಸಿರುವ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಇಂದು ಮಧ್ಯಾಹ್ನ ಕೈಗೆತ್ತಿಕೊಳ್ಳಲಿದೆ. 

ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ಅವರಿಗೇ ಮುಳುವಾಗಿ ಪರಿಣಮಿಸಿದೆ. ರಾಹುಲ್ ಗಾಂಧಿ 2016ರ ವಿಧಾನಸಭೆ ಚುನಾವಣೆ ವೇಳೆ ಮಮತಾ ಬ್ಯಾನರ್ಜಿಯನ್ನು ಟೀಕಿಸಿ ಹಲವಾರು ಬಾರಿ ಟ್ವೀಟ್ ಮಾಡಿದ್ದರು. ಶಾರದಾ ಚಿಟ್ ಫಂಡ್ ಹಗರಣದ ವಿರುದ್ಧ ಮತ್ತು ಮಮತಾ ಬ್ಯಾನರ್ಜಿ ಆರೋಪಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ನೇರವಾಗಿ ಆರೋಪಿಸಿ ರಾಹುಲ್ ಟ್ವೀಟ್ ಮಾಡಿದ್ದರು. ಬಹಿರಂಗ ಸಭೆಗಳಲ್ಲಿ ಸಹ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಮತಾ ಕೈವಾಡವಿದೆ ಎಂದು ಆರೋಪಿಸಿದ್ದರು. ರಾಷ್ಟ್ರದ ಅತೀ ದೊಡ್ಡ ಹಗರಣ ಇದಾಗಿದ್ದು, ಇದರ ಬಗ್ಗೆ ಮತಾ ಒಂದೂ ಮಾತನಾಡುತ್ತಿಲ್ಲ ಎಂದೂ ರಾಹುಲ್ ಟೀಕಿಸಿದ್ದರು. 

ಆದರೆ ಈಗ ಏಕಾ ಏಕಿ ಮಮತಾ ಬೆನ್ನಿಗೆ ನಿಂತಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ರಾಹುಲ್ ಗಾಂಧಿಯವರಿಗೆ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಆಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.   

ಒಟ್ಟಾರೆ, ದೇಶದ ದೊಡ್ಡ ರಾಜಕೀಯ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಯು ಟರ್ನ್ ಗೆ ಭಾರೀ ಟೀಕ್ ವ್ಯಕ್ತವಾಗುತ್ತಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button