Latest

ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಮಧ್ಯೆ ಮಾರಾಮಾರಿ: ಆನಂದ ಸಿಂಗ್ ಆಸ್ಪತ್ರೆಗೆ ದಾಖಲು

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಈಗಲ್ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಶಾಸಕರಿಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು ಶಾಸಕ ಆನಂದ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಸಕ ಭೀಮಾ ನಾಯಕ ಮತ್ತು ಆನಂದ ಸಿಂಗ್ ಮಧ್ಯೆ ಹೊಡೆದಾಟ ನಡೆದಿದೆ. ಆನಂದ ಸಿಂಗ್ ಅವರಿಗೆ ಬಾಟಲಿಯಲ್ಲಿ ಹೊಡೆಯಲಾಗಿದೆ ಎಂದು ಹೇಳಲಾಗಿದ್ದು, ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನುದಾನ ಹಂಚಿಕೆ ಸಂಬಂಧ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎನ್ನಲಾಗಿದೆ. ಆದರೆ, ಒಂದು ಮೂಲದ ಪ್ರಕಾರ ಬಿಜೆಪಿ ಸೇರುವ ವಿಚಾರವಾಗಿ ಜಗಳ ನಡೆದಿದೆ. 

Home add -Advt

ಗಲಾಟೆ ನಡೆದಿದೆ ಎನ್ನುವುದನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಳ್ಳಿ ಹಾಕಿದ್ದರೆ, ಗಲಾಟೆಯಾಗಿದೆ ೆನ್ನುವುದನ್ನು ಕೇಳಿದ್ದೇನೆ. ಈ ಬಗ್ಗೆ ವಿವರ ಗೊತ್ತಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ್ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.  ಈ ಕುರಿತು ಮಾತನಾಡಿರು ಡಿ.ಕೆ.ಶಿವಕುಮಾರ್, ಮಾರಾಮಾರಿ ಎಲ್ಲ ನಡೆದಿಲ್ಲ. ಅನುದಾನ ಹಂಚಿಕೆ ಸಂಬಂಧ ಚರ್ಚೆ ನಡೆದಿದೆ ಅಷ್ಟೆ. ಅವರೇ ಮಾಧ್ಯಮಗಳ ಮುಂದೆ ಬಂದು ಮಾಹಿತಿ ನೀಡುತ್ತಾರೆ ಎಂದು ತೇಪೆ ಹಚ್ಚುವ ಯತ್ನ ಮಾಡಿದ್ದಾರೆ. 

ಆನಂದ ಸಿಂಗ್ ಅವರ ಪತ್ನಿ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಮಂಬೈಗೆ ತೆರಳಿದ್ದರೆಂದು ಹೇಳಲಾಗಿದ್ದು, ಗಲಾಟೆ ಸುದ್ದಿ ತಿಳಿದು ಮರಳಿ ಬರುತ್ತಿದ್ದಾರೆನ್ನಲಾಗಿದೆ. 
ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಇದು ರಾಜ್ಯದ ಜನರು ತಲೆತಗ್ಗಿಸುವಂತಹ ಘಟನೆ ಎಂದಿದ್ದಾರೆ.

Related Articles

Back to top button