Latest

ರೇಪ್ ಪ್ರಸ್ತಾಪಕ್ಕೆ ಮಹಿಳಾ ಸದಸ್ಯರ ಆಕ್ಷೇಪ : ಸ್ಪೀಕರ್ ಕ್ಷಮಾಪಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ವಿಧಾನಸಭೆಯಲ್ಲಿ ಆಡಿಯೋ ಪ್ರಕರಣದ ಚರ್ಚೆಯ ವೇಳೆ ತಾವು ಅತ್ಯಾಚಾರ ಕುರಿತು ಆಡಿದ ಮಾತುಗಳಿಗೆ ಮಹಿಳಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ ಕುಮಾರ ಕ್ಷಮೆ ಕೋರಿದ್ದಾರೆ.

Home add -Advt

ರೇಪ್ ಕುರಿತು ಸ್ಪೀಕರ್ ಮಾತು ಕಡತದಿಂದ ತೆಗೆಯುವಂತೆ ಶಾಸಕಿ ಅಂಜಲಿ ಮನವಿ

ಅನಿತಾ ಕುಮಾರಸ್ವಾಮಿ, ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ರೂಪಕಲಾ ಶಶಿಧರ, ಕನೀಜ್ ಫಾತಿಮಾ, ಸೌಮ್ಯ ರಡ್ಡಿ, ವಿನೀಶಾ ನೆರೋ ಸೇರಿದಂತೆ ಎಲ್ಲ ಮಹಿಳಾ ಸದಸ್ಯರು ಸ್ಪೀಕರ್ ಕಚೇರಿಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸಭಾಧ್ಯಕ್ಷ ಮಾತುಗಳಿಂದ ತಮಗೆಲ್ಲ ನೋವಾಗಿದೆ ಎಂದು ತಿಳಿಸಿದ್ದರು. 

ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿದ ರಮೇಶಕುಮಾರ, ಎಲ್ಲ ಮಹಿಳಾ ಸದಸ್ಯರು ನನ್ನನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ನನ್ನ ಮಾತುಗಳಿಂದ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ ಎಂದು ವಿವಾದಕ್ಕೆ ಅಂತ್ಯ ಹಾಡಿದರು. 

 

Related Articles

Back to top button