Latest

ರೈತರು ಜಾನುವಾರುಗಳ ಆರೋಗ್ಯದ ಬಗ್ಗೆ ಗಮನ ಹರಿಸಲಿ

 

   ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ

ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯದ ಕಡೆಗೆ ರೈತರು ಗಮನ ಹರಿಸಿದಲ್ಲಿ ಸದೃಢ ಕರುಗಳು ಜನಿಸಲು ಸಾಧ್ಯ ಎಂದು ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ. ಎಂ.ಬಿ. ಪಾಟೀಲ ಹೇಳಿದರು.

ತಾಲೂಕಿನ ಗುಡಸ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ, ಗ್ರಾಮ ಪಂಚಾಯತ, ಪಿಕೆಪಿಎಸ್, ಕೆಎಂಎಫ್‌ಗಳ ಸಂಯುಕ್ತ ಆಶ್ರಯದಲ್ಲಿ  ನಡೆದ ಕರುಗಳ ಬೃಹತ್ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಲ್ಲಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳುವುದರ ಮೂಲಕ ಜಾನುವಾರುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವಿ ನೇರ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಸುರೇಶ ಅಂಗಡಿ ವೈಜ್ಞಾನಿಕವಾಗಿ ಕರುಗಳ ಪಾಲನೆ ಕುರಿತು ಉಪನ್ಯಾಸ ನೀಡಿದರು.

ಪ್ರದರ್ಶನದಲ್ಲಿ 60 ಕ್ಕೂ ಹೆಚ್ಚು ಕರುಗಳು ಭಾಗವಹಿಸಿದ್ದವು. ಸರ್ವಶ್ರೇಷ್ಠ ಕರು ಪ್ರಶಸ್ತಿಯನ್ನು ನೀಡಲಾಯಿತು. ಡಾ. ಮಲ್ಲಪ್ಪಾ ತಳವಾರ, ಡಾ.ಕೆ.ಬಿ. ಅಸ್ಕಿ, ಡಾ. ಇಮಗೌಡನ್ನವರ, ಡಾ. ಎಂ.ಕೆ. ಕುಂದರಗಿ, ಕೆಎಂಎಫ್ ಪಶು ವೈದ್ಯಾಧಿಕಾರಿ ಡಾ. ದರ್ಶನ, ಡಾ. ಎಸ್.ಎಂ. ನಾಯಿಕ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button