Latest

ಲಿಂಗರಾಜ ಬಿಬಿಎ ತಂಡಕ್ಕೆ ವೀರಾಗ್ರಣಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಮಂಗಳೂರಿನ ಸಂತ ಅಲೊಶಿಯಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವ್ಯವಸ್ಥಾಪನ ಸ್ಪರ್ಧೆ ಸ್ಪಿನ್ ಔಟ್-೨೦೧೯ ರಲ್ಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವಿರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ನಮನ ಜೈನ್ ಹಾಗೂ ರುಚಿ ಪೋರವಾಲ ಹಣಕಾಸು ವಿಭಾಗದಲ್ಲಿ ಪ್ರಥಮ, ರಾಶಿ ಶಿರಗುಪ್ಪಿ ಹಾಗು ವೈಷ್ಣವಿ ಮಾನವ ಸಂಪನ್ಮೂಲದಲ್ಲಿ ಪ್ರಥಮ, ಕೌಶಲ ಹಾಗು ಸುಧಾಂಶು ಸೇವಾ ವ್ಯವಹಾರಿಕತೆಯಲ್ಲಿ ಪ್ರಥಮ ಮತ್ತು ನೋಮನ್ ಸಯ್ಯದ ಹಾಗು ಅಬ್ದುಲ್ ಬಸಿತ್ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವೀರಾಗ್ರಣಿ ಪಡೆದ ತಂಡವನ್ನು ಪ್ರೊ. ಪಿ.ಆರ್. ಕಡಕೋಳ ಹಾಗೂ ಪ್ರಾಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

Related Articles

Back to top button