Latest

ವಚನಗಳು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪ

ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಸರ್ವಜ್ಞ ಜಗತ್ತಿನ ಮಹಾನ್ ದಾರ್ಶನಿಕ. ಜಗತ್ತಿನ ಜನರ ಸುಧಾರಣೆಗೆ ತ್ರಿಪದಿಗಳ ಮೂಲಕ ನೀಡಿದ ವಚನಗಳು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪಗಳಾಗಿವೆ ಎಂದು ಸ್ಥಳೀಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ನಗರದ ಕುಂಬಾರ ಗಲ್ಲಿಯ ಭಗತ್ ಸಿಂಗ್ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾದ ಸರ್ವಜ್ಞ ಕವಿಯ ಜಯಂತಿ ಉತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ವಜ್ಞ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಸಂದೇಶ ನೀಡಿದ್ದಾರೆ. ಮಹಾಭಾರತ ಕಾಲದ ಕೃಷ್ಣನ ಮಾತುಗಳಂತೆ ಸರ್ವಜ್ಞನ ವಚನಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ನುಡಿದರು.
ಪೌರಾಯುಕ್ತ ಎಂ.ಎಚ್ ಅತ್ತಾರ, ಕಾರ್ಮಿಕ ನಿರೀಕ್ಷಕ ಪಿ.ವಿ. ಮಾವರಕರ, ಆಹಾರ ನಾಗರಿಕ ಸರಬರಾಜು ಇಲಾಖೆ ಶಿರಸ್ತೆದಾರ ಎಂ.ಎ. ಚೌಧರಿ, ಮುಖಂಡರಾದ ಮಹಾಂತೇಶ ಕಂಬಾರ, ದುಂಡಪ್ಪ ಕಂಬಾರ, ಗೋಪಿ ಕಂಬಾರ, ಅಶೋಕ ಬಂಡಿ, ಶಿವು ಗಡಾದವರ ಮುಂತಾದವರು ಇದ್ದರು.

Related Articles

Back to top button