Latest

ವಿಕಲ ಚೇತನರಿಗಾಗಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಕಲ ಚೇತನರಿಗಾಗಿ ವಿಶ್ವದ  ಅತಿ ದೊಡ್ಡ  ಉದ್ಯೋಗ ಮೇಳವನ್ನು ಬೆಂಗಳೂರಿನ ಫ್ರೆಜರ್ ಟೌನ್ ನ ಸೇಂಟ್ ಝ್ಸೆವಿಯರ್ ಗರ್ಲ್ಸ್ ಹೈಸ್ಕೂಲ್ ಆವಾರದಲ್ಲಿ 2019ರ ಫೆ‌ 24 ರಂದು ಹಮ್ಮಿಕೊಳ್ಳಲಾಗಿದೆ.
ವೀ ಆರ್ ಯುವರ್ ವೈಸ್ ಸಂಸ್ಥೆಯು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು ದೃಷ್ಟಿ ದೋಷ, ವಾಕ್ ಶ್ರವಣ ದೋಷ ಮತ್ತಿತರ ಅಂಗವಿಕಲತೆಯುಳ್ಳ ಎಸ್ ಎಸ್ ಎಲ್ ಸಿ , ಪಿಯುಸಿ, ಪದವಿ , ಐಟಿಐ , ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ 7557550888 ಅಥವಾ 7557550999 ಗೆ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button