Belagavi NewsBelgaum NewsKannada NewsKarnataka NewsLatest

*ಬೊಲೆರೋ ಪಿಕ್-ಅಪ್ ಮತ್ತು ಬೈಕ್ ಡಿಕ್ಕಿ: ಬೈಕ್ ನ ಹಿಂಬದಿ ಸವಾರ ಸಾವು*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ತಾಲ್ಲೂಕಿನ ಕುಂಭರ್ಡಾ ಗ್ರಾಮದ ಬಳಿ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಬೊಲೆರೋ ಪಿಕ್-ಅಪ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಗೋವಾ ರಾಜ್ಯದ ಫೋಂಡಾ ನಿವಾಸಿ ಮಹಮ್ಮದ್ ಇಜಾಜ್ ಸಿದ್ಧಿಕಿ (17) ಮತ್ತು ಗಾಯಾಳುವನ್ನು ಲತೀಫ್ ತನ್ವಿ (20) ಎಂದು ಗುರುತಿಸಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಬೊಲೇರೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button