ಪ್ರಗತಿವಾಹಿನಿ ಸುದ್ದಿ, ಹೊಸೂರು (ಬೈಲಹೊಂಗಲ) : ಪ್ರಜಾಸೇವೆ ಇಲಾಖೆ ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಮತ್ತು ಜನರ ಮನೆ ಬಾಗಿಲಲ್ಲೇ ಪರಿಹರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಹೊಸೂರ ಗ್ರಾಮದಲ್ಲಿ ಶನಿವಾರ ಜಿಲ್ಲಾ ಪಂಚಾಯತಿ ಬೆಳಗಾವಿ, ತಾಲೂಕ ಆಡಳಿತ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಭೆಯಲ್ಲಿ ಚರ್ಚೆಯಾದ ವಿದ್ಯುತ್ ಸಮಸ್ಯೆ, ಹೊಸೂರಿನ ಮಲಪ್ರಭೆ ನದಿಯ ಎಡದಂಡೆ ಹಾಗೂ ಬಲದಂಡೆ ಕಾಲುವೆಯ ರಸ್ತೆ ರಿಪೇರಿ, ಪಿಯುಸಿ ಕಾಲೇಜು ನಿರ್ಮಾಣ, ಶಾಲೆಗಳಿಗೆ ಶೌಚಾಲಯ, ಆವರಣ, ಪಶು ಆಸ್ಪತ್ರೆಯ ಆವರಣ, ಸಿಸಿಟಿವಿ ಅಳವಡಿಕೆ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳ ವಸತಿ ನಿಲಯ ರಿಪೇರಿ ವಿವಿಧ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹರಿಸುವುದಾಗಿ ತಿಳಿಸಿದರು.
ತಹಶೀಲ್ದಾರ ಎಂ.ಎನ್.ಹೆಗ್ಗಣ್ಣವರ ಮಾತನಾಡಿ, ಸ್ವೀಕೃತ ೧೦೨ ಅರ್ಜಿಗಳಿಗೆ ನಿಗದಿತ ಕಾಲಮಿತಿಯೊಳಗೆ ಪರಿಶೀಲಿಸಿ ತ್ವರಿತವಾಗಿ ಬಗೆ ಹರಿಸಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷೆ ದೀಪಾ ಪಾಟೀಲ, ಉಪಾಧ್ಯಕ್ಷ ಬಿ.ಎಚ್.ಪೆಂಟೇದ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಉಮೇಶ ಬೋಳತ್ತೀನ, ತಾಪಂ ಇಒ ಆನಂದ ಬಡಕುಂದ್ರಿ, ಜಿ.ಪಂ.ಇಂಜನೀಯರ ಬಸವರಾಜ ಅಯ್ಯನಗೌಡರ, ಬಿಇಒ ಎ.ಎ.ಖಾಜಿ, ಸಿಡಿಪಿಒ ಅಮೃತಾ ಸಾಣಿಕೊಪ್ಪ, ಟಿಬಿಸಿಡಬ್ಲೂಒ ಆರ್.ಎಲ್.ಕದಂ, ಉಪತಹಶೀಲ್ದಾರ ಡಿ.ಬಿ.ಅಲ್ಲಯ್ಯನವರಮಠ, ಕಂದಾಯ ನಿರೀಕ್ಷಕ ಆರ್.ಎಸ್.ಪಾಟೀಲ, ಪಿಡಿಒ ಎಂ.ವಿ.ಗೋಸಬಾಳ, ವಿಎಒ ಸಾವಿತ್ರಿ ರೂಡಗಿ, ಗ್ರಾಮ ಸಹಾಯಕ ಮಹಾದೇವಪ್ಪ ಇಂಗಳಗಿ ಹಾಗೂ ತಾಲೂಕಾ, ಹೋಬಳಿ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸುತ್ತಲಿನ ಗ್ರಾಮಗಳ ಸಾರ್ವಜನಿಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಬಸವರಾಜ ಬಾಳೇಕುಂದರಗಿ ಸ್ವಾಗತಿಸಿ, ನಿರೂಪಿಸಿದರು. ಗಜಾನಂದ ಆರೇರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




