ಪ್ರಗತಿವಾಹಿನಿ ವಿಶೇಷ, ಬೆಳಗಾವಿ
ಬೆಳಗಾವಿಯ ವಿಧಾನಮಂಡಳದ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿಲ ಮಗಳವಾರ ಬೆಳಗಿನಜಾವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ವಾಕಿಂಗ್ ಮಾಡಿದರು.
ಹಸಿರು ಬಣ್ಣದ ಟಿ ಶರ್ಟ್ ಧರಿಸಿದ್ದ ಕುಮಾರಸ್ವಾಮಿ ವಿಟಿಯು ಸುಂದರ ಪರಿಸರದಲ್ಲಿ ವಾಕಿಂಗ್ ಖುಷಿ ಅನುಭವಿಸಿದರು. ಇದೇ ವೇಳೆ ಪೊಲೀಸ್ ಡಾಗ್ ಮಾತನಾಡಿಸಿ ಅವರು, ಅದಕ್ಕೆ ಹಸ್ತಲಾಘವ ಮಾಡಿದರು.
ಅಧಿವೇಶನದ ವೇಳೆ ಮುಖ್ಯಮಂತ್ರಿಗಳು ಪ್ರವಾಸಿ ಮಂದಿರದಲ್ಲಿ ಉಳಿಯುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ ವಿಟಿಯು ಅತಿಥಿಗೃಹದಲ್ಲಿ ಉಳಿದಿದ್ದಾರೆ. ವಾಸ್ತು ಹಿನ್ನೆಲೆಯಲ್ಲಿ ವಿಟಿಯುಗೆ ಸ್ಥಳಾಂತವಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ವಿಟಿಯು ಆವರಣದ ಸುಂದರ ಪರಿಸರದಲ್ಲಿ ವಾಕ್ ಮಾಡಲು ಅನುಕೂಲವಾಗಲಿದೆೆಂದು ಅಲ್ಲಿಗೆ ಸ್ಥಳಾಂತರವಾಗಿದ್ದಾರೆ ಎಂದು ಸ್ಪಷ್ಟೀಕರಣವೂ ಹೊರಬಿದ್ದಿತ್ತು.
ಈಗ ಅದಕ್ಕೆ ಪೂರಕವಾಗಿ ಮೊದಲದಿನವಾದ ಮಂಗಳವಾರ ವಾಕ್ ಮಾಡಿ ಪ್ರೆಶ್ ಆದರು. ಸಿಎಂ ವಾಸ್ತವ್ಯದ ಹಿನ್ನೆಲೆಯಲ್ಲಿ ವಿಟಿಯು ಆವರಣಕ್ಕೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ವಿಟಿಯು ಆವರಣದಲ್ಲಿ ಕುಮಾರಸ್ವಾಮಿ ವಾಕ್ ಮಾಡುವ ಎಕ್ಸಕ್ಲೂಸಿವ್ ಫೋಟೋಗಳು ಪ್ರಗತಿವಾಹಿನಿ ಓದುಗರಿಗಾಗಿ ಇಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ