ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಖಾಸಗಿ ನಿರ್ಣಯ ಮಂಡಿಸಲು ಗುರುವಾರ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಶುಕ್ರವಾರ ಧರಣಿ ನಡೆಸಿದರು.
ಸುವರ್ಣವಿಧಾನಸೌಧದ ಗೇಟ್ ನಲ್ಲಿ ಶಾಸಕರಿಬ್ಬರೂ ಬೆಳಗ್ಗೆ ಧರಣಿ ನಡೆಸಿದರು. ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ಐತಿಹಾಸಿಕ ವ್ಯಕ್ತಿಗಳ ಸ್ಮಾರಕವೊಂದನ್ನು ನಿರ್ಮಣ ಮಾಡಬೇಕೆನ್ನುವ ವಿಷಯದ ಮೇಲೆ ಖಾಸಗಿ ನಿರ್ಣಯ ಮಂಡಿಸಲು ಅಭಯ ಪಾಟೀಲ ನಿರ್ಧರಿಸಿದ್ದರು. ಅಜೆಂಡಾದಲ್ಲೂ ವಿಷಯ ಸೇರ್ಪಡೆಯಾಗಿತ್ತು. ಆದರೆ 6 ಗಂಟೆಗೆ ಸಮಯವಾಯಿತೆಂದು ಸಧನವನ್ನು ಶುಕ್ರವಾರಕ್ಕೆ ಮುಂದಕ್ಕೆ ಹಾಕಲಾಯಿತು. ಇದರಿಂದಾಗಿ ನಿರ್ಣಯ ಮಂಡಿಸಲು ಅವಕಾಶ ಸಿಗಲೇ ಇಲ್ಲ. ಮತ್ತೆ ಯಾವಾಗ ಅವಕಾಶ ನೀಡಲಾಗುವುದೆನ್ನುವುದನ್ನೂ ಪ್ರಕಟಿಸಿಲ್ಲ. ಇದರಿಂದ ರೊಚ್ಚಿಗೆದ್ದ ಶಾಸಕರು ಶುಕ್ರವಾರ ಧರಣಿ ನಡೆಸಿದರು.
ಬೆಳಗಾವಿ ವಿಷಯ ಚರ್ಚಿಸುವುದಕ್ಕೇ ಮನಸ್ಸಿಲ್ಲದಿದ್ದರೆ ಇಲ್ಲಿ ಅಧಿವೇಶನ ನಡೆಸಿ ಏನು ಪ್ರಯಜನ ಎಂದು ಅಭಯ ಪಾಟೀಲ ಪ್ರಶ್ನಿಸಿದರು.
ತಿದ್ದಿದ ಫುಂಡರು: ಈ ಮಧ್ಯೆ ಶಾಸಕರ ಧರಣಿಯ ಫೋಟೋವನ್ನು ಕೆಲವರು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಶಾಸಕರು ಹಿಡಿದಿದ್ದ ಫಲಕದ ಮೇಲಿನ ಬರವನ್ನು ತಿದ್ದಿ, ಗಡಿ ವಿವಾದವನ್ನು ಬರೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ