Latest

ವಿರಾಟ್  ಕೊಹ್ಲಿಗೆ ಐಸಿಸಿ 2018 ವರ್ಷದ ಆಟಗಾರ ಪ್ರಶಸ್ತಿ

    ಪ್ರಗತಿವಾಹಿನಿ ಸುದ್ದಿ, ನವದೆಹಲಿ

 ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಐಸಿಸಿ 2018 ವರ್ಷದ ಆಟಗಾರ ಪ್ರಶಸ್ತಿಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್  ಕೊಹ್ಲಿಗೆ ಲಭಿಸಿದೆ.

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 2018ರ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದ್ದು, 2018ರ ವರ್ಷದಲ್ಲಿ ಕ್ರಿಕೆಟ್‌ನಲ್ಲಿನ ಅದ್ಭುತ ಸಾಧನೆಗಾಗಿ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದೆ. ಕೊಹ್ಲಿ ಅವರು ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಪ್ರಶಸ್ತಿ ಬಾಚಿಕೊಂಡಿದ್ದಾರೆ. 

ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ಅಗ್ರ ಸ್ಥಾನಕ್ಕೆ ಏರಿದ್ದರಲ್ಲದೆ, ನಂ.1 ಸ್ಥಾನದಲ್ಲೇ ಭದ್ರವಾಗಿದ್ದರು. ಟೆಸ್ಟ್ ಮತ್ತು ಏಕದಿನ ಎರಡೂ ಐಸಿಸಿ ಪ್ರಶಸ್ತಿಯನ್ನು ಒಟ್ಟಿಗೆ ಪಡೆದ ವಿಶ್ವದ ಮೊದಲ ಆಟಗಾರ ಎನ್ನುವ ಹೆಮ್ಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಸಾಧನೆಯೊಂದಿಗೆ ಕೊಹ್ಲಿ ಅವರು ಐಸಿಸಿ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಎಂಬ ಹಿರಿಮೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.

Home add -Advt

ಒಟ್ಟು 14 ಏಕದಿನ ಪಂದ್ಯಗಳಲ್ಲಿ 133.55 ಸರಾಸರಿಯಂತೆ ಕೊಹ್ಲಿ 1202 ರನ್ ಸಾಧನೆ ಹೊಂದಿದ್ದಾರೆ. 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೊಹ್ಲಿ 211 ರನ್ ಬಾರಿಸಿದ್ದಾರೆ. 13 ಟೆಸ್ಟ್ ಪಂದ್ಯಗಳಲ್ಲಿ 55.08ರ ಸರಾಸರಿಯಂತೆ ಒಟ್ಟು 1,322 ರನ್ ಗಳನ್ನು ಕೊಹ್ಲಿ 2018ರ ವರ್ಷದಲ್ಲಿ ಗಳಿಸಿದ್ದರು. ಇದರಲ್ಲಿ 5 ಶತಕಗಳೂ ಸೇರಿದ್ದವು.  

Related Articles

Back to top button