ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಭರತೇಶ ಬಿಬಿಎ ಕಾಲೇಜಿನಲ್ಲಿ ನಡೆದ ವ್ಯವಸ್ಥಾಪನ ಸ್ಪರ್ಧೆ ’ನಿರ್ವಿಕಲ್ಪ-೨೦೧೯’ ನಲ್ಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ರಿಶಭ ಕೋರೆ ಮಾರುಕಟ್ಟೆ ವಿಭಾಗದಲ್ಲಿ ಪ್ರಥಮ, ಫೈಜಾನ ಸೇಠ ಹಣಕಾಸು ವಿಭಾಗದಲ್ಲಿ ಪ್ರಥಮ, ವೈಷ್ಣವಿ ಕುಲಕರ್ಣಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಪ್ರಥಮ, ನೊಮಾನ ಸಯ್ಯದ ರಸಪ್ರಶ್ನೆಯಲ್ಲಿ ಪ್ರಥಮ ಮತ್ತು ಕಿಶನಕುಮಾರ ಅತ್ಯುತ್ತಮ ವ್ಯವಸ್ಥಾಪನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.