ಪ್ರಗತಿವಾಹಿನಿ ಸುದ್ದಿ, ಅಮೇಠಿ
ಹತ್ಯೆಗೊಳಗಾಗಿರುವ ತಮ್ಮ ಅಭಿಮಾನಿಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಅಮೇಠಿ ಸಂಸದೆ ಸ್ಮೃತಿ ಇರಾನಿ ಆತನ ಶವಕ್ಕೆ ಹೆಗಲು ಕೊಟ್ಟರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಪರ ಪ್ರಚಾರ ಮಾಡಿದ್ದ ಸುರೇಂದ್ರ ಸಿಂಗ್ ಎನ್ನುವ ಅಭಿಮಾನ ವಿಜಯೋತ್ಸವದ ವೇಳೆ ನಿನ್ನೆ ಹತ್ಯೆಗೀಡಾಗಿದ್ದರು. ವಿಷಯ ತಿಳಿದು ಅಮೇಠಿಗೆ ಧಾವಿಸಿದ ಸ್ಮೃತಿ ಅಂತಿಮ ದರ್ಶನ ಪಡೆದು, ಶವ ಹೊತ್ತು ಸಾಗಿದರು.