ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜೈನ ಮುನಿಗಳಾದ ಶ್ರೀ ೧೦೮ ಆಚಾರ್ಯ ಧರ್ಮಸೇನ ಮತ್ತು ಶ್ರೀ ೧೦೫ ಕ್ಷುಲ್ಲಕ ಚಂದ್ರಸೇನ ಮುನಿಗಳು ಗುರುವಾರ ಸಂಜೆ ಬೆಳಗಾವಿ ನಗರವನ್ನು ಪ್ರವೇಶ ಮಾಡಿದರು.
ಬೆಳಗಾವಿಯ ಹಿಂದವಾಡಿಯಲ್ಲಿರುವ ಜಿನಮಂದಿರದ ನೂತನೀಕರಣ ಮತ್ತು ಶ್ರೀ ೧೦೦೮ ಚಂದ್ರಪ್ರಭ, ಆದಿನಾಥ ಮತ್ತು ಭ.ಭರತ ಹಾಗೂ ೨೪ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಡಿ.೩೦ ರಿಂದ ಜ.೩ ರವರೆಗೆ ನಡೆಯಲಿದ್ದು, ಈ ಪಂಚಕಲ್ಯಾಣ ಮಹಾಮಹೋತ್ಸವದ ಸಾನಿಧ್ಯವನ್ನು ಶ್ರಿಗಳು ವಹಿಸಲಿದ್ದಾರೆ.
ಗುರುವಾರ ಸಾಯಂಕಾಲ ಹಿಂದವಾಡಿಯ ಮಹಾವೀರ ಭವನ ಬಳಿ ಜೈನ ಸಮಾಜ ಮುಂಖಡರಿಂದ ಶ್ರೀಗಳಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಶ್ರೀಗಳನ್ನು ವಾದ್ಯಮೇಳದೊಂದಿಗೆ ಹಿಂದವಾಡಿ ಜೈನ ಬಸದಿಯವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭೂಷಣ ಮಿರ್ಜಿ, ಉಪಾಧ್ಯಕ್ಷ ಶೀತಲ ನಿಲಜಗಿ ಪದಾಧಿಕಾರಿಗಳಾದ ಅಪ್ಪಾಸಾಹೇಬ ಕಟಗೆಣ್ಣವರ, ಸುಹಾಸ ಹುಲಭತ್ತೆ, ಬ್ರಹ್ಮಾನಂದ ನಿಲಜಗಿ, ಸನತಕುಮಾರ ವಿ.ವಿ., ಅಭಯ ಅವಲಕ್ಕಿ, ಸಂತೋಷ ಚಿಪ್ರೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ