ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬಿಜೆಪಿ ನಾಯಕರು ಸಂ-ಕ್ರಾಂತಿ ಮಾಡಲು ಹೋಗಿ ಸಂ-ಭ್ರಾಂತಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಿಜೆಪಿ ಶಾಸಕರಿಗೆ ರಾಜಿನಾಮೆ ಸಲ್ಲಿಸಲು ಆಮಿಷ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಿದ್ದಾರೆ. ಇದು ನನಗೇ ಆಶ್ಚರ್ಯ ತಂದಿದೆ. ಎಲ್ಲ ರೀತಿಯ ವ್ಯರ್ಥ ಕಸರತ್ತು ಮಾಡುತ್ತಿರುವವರು ಅವರೇ. ಯಾರ್ಯಾರು ಲೀಡ್ ತಗೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುವ ಚಿತ್ರ ಈಗಗಲೆ ಬಿಡುಗಡೆಯಾಗಿದೆ ಎಂದರು.
ನಾನು ಕುಟುಂಬದ ಜೊತೆಗೆ ವಿದೇಶಕ್ಕೆ ಹೋಗಿದ್ದನ್ನೇ ಯಡಿಯೂರಪ್ಪ ದೊಡ್ಡ ವಿವಾದ ಮಾಡಿದರು. ಬರಗಾಲದಲ್ಲಿ ವಿದೇಶಕ್ಕೆ ಹೋಗಿದ್ದಾರೆ ಎಂದರು. ಈಗ ನೀವು ಗುರಗಾಂವ್ ಗೆ ಹೋಗಿ ಎಷ್ಟು ದಿನ ಆಯಿತು? ಯಾವ ಸಾಧನೆ ಮಾಡಲು ಅಲ್ಲಿ ಶಾಸಕರನ್ನು ಕೂಡಿಹಾಕಿದ್ದೀರಿ? ಅಲ್ಲಿ ಬರವೀಕ್ಷಣೆ ಮಾಡುತ್ತಿದ್ದೀರಾ? ಈಗ ಬರ ಎಲ್ಲ ಹೋಗಿದೆಯಾ? ಇದಕ್ಕೆ ಏನು ಹೇಳುತ್ತೀರಿ? ನಮ್ಮ ಪಕ್ಷದ ಶಾಸಕರ ಬಗ್ಗೆ ಟೀಕೆ ಮಾಡುವವರು ನಿಮ್ಮವರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗುತ್ತಿಲ್ಲವೇ? ನಿಮ್ಮ ಮತ್ತು ನಿಮ್ಮ ಶಾಸಕರ ಮಧ್ಯೆ ಭಿನ್ನಾಭಿಪ್ರಾಯ ಏನಿದೆ? ಎಲ್ಲ ಮಾಡುವವರು ನೀವs. ಆದರೆ ಆಪಾದನೆ ನಮ್ಮ ಮೇಲೆ. ಜನರು ಸರಿಯಾದ ಸಂದರ್ಭದಲ್ಲಿ ನಿಮಗೆ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ