Politics

*ಅವನೇನು ಮನುಷ್ಯನೋ? ರಾಕ್ಷಸನೋ? ದರ್ಶನ್ ವಿರುದ್ಧ ಬೆಲ್ಲದ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಕಿಡ್ನ್ಯಾಪ್ ಮಾಡಿ, ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ನು ಬಂಧಿಸಲಾಗಿದ್ದು, ನಟ ದರ್ಶನ್ ಅವರ ರಕ್ಕಸ ಕೃತ್ಯಕ್ಕೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.

ನಟ ದರ್ಶನ್ ಪ್ರಕರಣದ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೆಲ್ಲದ್, ಅವನೇನು ಮನುಷ್ಯನೋ? ರಾಕ್ಷಸಸೋ? ಆತ ಈರೀತಿ ಇದ್ದಾನೆಂದು ಗೊತ್ತಿರಲಿಲ್ಲ. ಹಾಗಾಗಿ ಅವನನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ಮಾಡಲಾಗಿತ್ತು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಮಾಡುತ್ತಿರುವ ತಪ್ಪುಗಳು ಒಂದೆರಡಲ್ಲ. ಸಮಾಜ ವಿರೋಧಿ ಕೆಲಸ ಮಾಡುತ್ತಿರುವವರಿಗೆ ರಾಜಾತಿಥ್ಯ ಕೊಡ್ತೇವೆ ಎಂದರೆ ಏನ್ ಹೇಳ್ಬೇಕು? ಕ್ರಿಮಿನಲ್ ಗಳು ಯಾವತ್ತೂ ಕ್ರಿಮಿನಲ್ ಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

Related Articles

Back to top button