ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಜೆಟ್ ಪ್ರತಿಗಳನ್ನು ಮಂಡನೆಯ ಪೂರ್ವ ನೀಡದ ಹಿನ್ನೆಲೆಯಲ್ಲಿ ವಿಪಕ್ಷವಾದ ಬಿಜೆಪಿ ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸಲು ಎದ್ದು ನಿಲ್ಲುತ್ತಿದ್ದಂತೆ ಪ್ರತಿಗಳನ್ನು ನೀಡುವಂತೆ ಬಿಜೆಪಿ ಆಗ್ರಹಿಸಿತು. ಕೆಲಹೊತ್ತು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಬಿಜೆಪಿ ಸದಸ್ಯರು ನಂತರ ಕಲಾಪ ಬಹಿಷ್ಕರಿಸಿ, ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಧರಣಿ ಆರಂಭಿಸಿದರು.
12.35ಕ್ಕೆ ಬಜೆಟ್ ಭಾಷಣ ಆರಂಭಿಸಿದ ಕುಮಾರಸ್ವಾಮಿ ಎರಡೂವರೆ ಗಂಟೆಗಳ ನಂತರವೂ ಓದುತ್ತಲೇ ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ