Latest

ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರ: ಮಠಕ್ಕೆ ಭಕ್ತರ, ವಿಐಪಿಗಳ ದಂಡು

     ಪ್ರಗತಿವಾಹಿನಿ ಸುದ್ದಿ, ತುಮಕೂರು

ನಡೆದಾಡುವ ದೇವರು, ತ್ರಿವಿಧ ದಾಸೋಹಿ, 111 ವರ್ಷದ ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ತುಮಕೂರಿನತ್ತ ವಿಐಪಿಗಳ ಹಾಗೂ ಭಕ್ತರ ದಂಡು ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ.

ನಸುಕಿನಿಂದಲೇ ಮಠದತ್ತ ಭಕ್ತರ ಸಂಖ್ಯೆ ಹೆಚ್ಚಿದ್ದು, ಎಲ್ಲಿ ನೋಡಿದರೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮಠದಲ್ಲಿ ನಿಯಂತ್ರಣ ಕೊಠಡಿಯನ್ನು ಸಹ ತೆರೆಯಲಾಗಿದೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿನಿಂದ ಆರಂಭಿಸಬೇಕಿದ್ದ ಬರಪರಿಶೀಲನೆ ಪ್ರವಾಸ ಮುಂದೂಡಿ ತುಮಕೂರಿನತ್ತ ಧಾವಿಸುತ್ತಿದ್ದಾರೆ. ಸ್ವಾಮಿಗಳ ಆರೋಗ್ಯಗಂಭೀರವಾಗಿರುವ ಹಿನ್ನೆಲೆಯಲ್ಲಿ ನನ್ನೆಲ್ಲ ಕಾರ್ಯಕ್ರಮ ರದ್ಧುಪಡಿಸಿ ತುಮಕೂರಿಗೆ ಹೊರಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.  ಗೃಹ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ವಿಐಪಿಗಳು ದೊಡ್ಡ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಮಠಾಧೀಶರು ಸಹ ತುಮಕೂರಿನಲ್ಲ ಆಗಮಿಸುತ್ತಿದ್ದಾರೆ. ವಿವಿಐಪಿಗಳ ಸಂಖ್ಯೆ ಹೆಚ್ಚಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಠದ ಸಮೀಪ ಈಗಾಗಲೆ 14 ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗಿದೆ.

Home add -Advt

Related Articles

Back to top button