ಪ್ರಗತಿವಾಹಿನಿ ಸುದ್ದಿ, ತುಮಕೂರು
ಸೋಮವಾರ ನಿಧನರಾದ ತುಮಕೂರಿನ ಸಿದ್ದಗಂಗಾ ಶ್ರೀಗಳ ನಿಧನದ ಸುದ್ದಿಯನ್ನು ತಡವಾಗಿ ಘೋಷಣೆ ಮಾಡಿದ್ದಕ್ಕೆ ಶ್ರೀಗಳ ಸೂಚನೆಯೇ ಕಾರಣ ಎಂದು ಗೊತ್ತಾಗಿದೆ.
ಶ್ರೀಗಳು ಬೆಳಗ್ಗೆ 11.44ಕ್ಕೆ ನಿಧನರಾಗಿದ್ದಾರೆ. ಆದರೆ ಘೋಷಣೆ ಮಾಡಿದ್ದು 1.56ಕ್ಕೆ. ತಾವು ನಿಧನರಾದರೆ ಮಕ್ಕಳು ಹಸಿದುಕೊಂಡಿರಬಾರದು. ಅವರ ಅನ್ನ ದಾಸೋಹ ಮುಗಿದ ನಂತರವಷ್ಟೆ ಘೋಷಣೆ ಮಾಡಿ ಎಂದು ಶ್ರೀಗಳು ಸೂಚಿಸಿದ್ದರಂತೆ. ಹಾಗಾಗಿ ಮಕ್ಕಳ ಊಟ ಮುಗಿಯುವವರೆಗೆ ಕಾದು ನಂತರ ಶ್ರೀಗಳ ನಿಧನದ ವಿಷಯ ಘೋಷಣೆ ಮಾಡಲಾಯಿತು.
					
				
					
					
					
					
					
					
					


