ಪ್ರಗತಿವಾಹಿನಿ ಸುದ್ದಿ, ಘಟಪ್ರಭ
ವಿಜ್ಞಾನ ಹಾಗೂ ಶಾಸ್ತ್ರಗಳು ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಪೂರಕವಾಗಿಯೆ ಎಂಟು ನೂರು ವರ್ಷಗಳ ಹಿಂದೆ ನಮ್ಮ ಹಿರಿಯರು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶವನ್ನು ತಡೆದಿದ್ದರು. ಇದರಲ್ಲಿ ಸಮಾನತೆಯ ಯಾವುದೇ ಭೇದವಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ.
ಘಟಪ್ರಭಾದ ಕರ್ನಾಟಕ ಆರೋಗ್ಯಧಾಮದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯ ಆರೋಗ್ಯ ನೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಎರಡು ದಿನದ ಹಿಂದೆ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಹಠದಿಂದ ಅಯ್ಯಪ್ಪನ ದರ್ಶನ ಮಾಡಿರುವುದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಈಗ ಅಲ್ಲಿ ನಡೆಯುತ್ತಿರುವ ಸಾವು-ನೋವು ಅನಾಹುತಗಳಿಗೆ ಅವರೇ ಕಾರಣರಾಗಿದ್ದಾರೆ.
ಶಬರಿಮಲೆ ವೃತ ತುಂಬಾ ಕಠಿಣವಾಗಿರುವುದರಿಂದ ಹಾಗೂ ಆ ಬೆಟ್ಟವನ್ನು ಊರ್ದ್ವ ಮುಖವಾಗಿ ಹತ್ತ ಬೇಕಾಗಿರುವುದರಿಂದ ಮಹಿಳೆಯರ ಗರ್ಭಕೋಶಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ವಿಜ್ಞಾನ ಹಾಗೂ ಶಾಸ್ತ್ರಕ್ಕೆ ಅನುಗುಣವಾಗಿ ಹಿಂದೆ ಹಿರಿಯರು 10-50 ವರ್ಷದ ಮಹಿಳೆಯರಿಗೆ ಪ್ರವೇಶವನ್ನು ನಿಷೇಧ ಮಾಡಿದ್ದಾರೆ. ಭಕ್ತಿ ಪೂರ್ವಕವಾಗಿ ದೇವರ ದರ್ಶನ ಮಾಡುವುದರೆ 10ರ ಒಳಗೆ ಹಾಗೂ 50 ವರ್ಷದ ನಂತರದ ಮಹಿಳೆಯರು ತೆರಳಿ ದರ್ಶನವನ್ನು ಪಡೆಯಬಹುದಾಗಿದೆ. ಅಯ್ಯಪ್ಪನ ದರ್ಶನಕ್ಕೆ ಸಮಾನತೆ ಇಲ್ಲ ಎನ್ನುವುದು ಮುರ್ಖತನವಾಗುತ್ತದೆ. ಸಮಾಜದಲ್ಲಿರುವ ಕೆಲವು ಬುದ್ಧಿ ಜೀವಿಗಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ ನೀಡಿದ ತೀರ್ಪು ಮರು ಪರಿಶೀಲನೆ ಮಾಡಿ ಹಿಂದಿನ ಪದ್ಧತಿಯನ್ನೆ ಉಳಿಯುವಂತೆ ಮಾಡಬೇಕು. ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಿ ಹಿಂದೂ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಕೇರಳ ಸರಕಾರವನ್ನ ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನ ಹೇರಬೇಕು ಎಂದು ಹೇಳಿದರು.
2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರವನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಈಗ ಸುಪ್ರೀಂಕೋರ್ಟ ತೀರ್ಪು ಬರುವ ತನಕ ಯಾವುದೆ ವಿಶೇಷ ಕಾನೂನನ್ನು ಜಾರಿಗೊಳಿಸಿ ರಾಮ ಮಂದಿರ ಕಟ್ಟಲು ಪ್ರಯತ್ನಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ನ್ಯಾಯಾಲಯದ ತೀರ್ಪಿಗಾಗಿ ಕಾಯದೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿ ರಾಮ ಮಂದಿರ ಕಟ್ಟಬೇಕೆಂದು ಅವರು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ