Latest

ಸುಬ್ರಮಣಿಯನ್ ಸ್ವಾಮಿ ವಜಾ ಮಾಡಿ ಭಾರೀ ಬೆಲೆ ತೆರಬೇಕಾದ ಐಐಟಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ:

ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ವಜಾ ಮಾಡಿದ್ದ ಶಿಕ್ಷಣ ಸಂಸ್ಥೆಯೊಂದು ಈಗ ಭಾರೀ ಬೆಲೆ ತೆರಬೇಕಾಗಿ ಬಂದಿದೆ. 

ವಜಾ ಗೊಂಡ ಅವಧಿಯಿಂದ ನ್ಯಾಯಾಲಯದ ತೀರ್ಪು ಬರುವವರೆಗಿನ 20 ವರ್ಷ ಅವಧಿಯ ಸಂಬಳ ಮತ್ತು ಬಡ್ಡಿಯನ್ನು ಸುಬ್ರಮಣ್ಯ ಸ್ವಾಮಿಗೆ ಸಂಸ್ಥೆ ಪಾವತಿಸಬೇಕಿದೆ.

ರಾಜಕಾರಣಕ್ಕೆ ಬರುವ ಮುನ್ನ ಸ್ವಾಮಿ ಅವರು ಐಐಟಿ (ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ 1969-1972ರ ವರೆಗೆ ಮೂರು ವರ್ಷ ಅರ್ಥಶಾಸ್ತ್ರ ಬೋಧಿಸಿದ್ದರು. ಆದರೆ, ಆಡಳಿತಮಂಡಳಿಯೊಂದಿಗೆ ಅನೇಕ ಮನಸ್ತಾಪಗಳು ಉಂಟಾದ ಕಾರಣ ಸ್ವಾಮಿ ಅವರನ್ನು ಸಂಸ್ಥೆಯಿಂದ ವಜಾ ಮಾಡಲಾಗಿತ್ತು. ಇದನ್ನು ಸ್ವಾಮಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದೆಹಲಿಯ ನ್ಯಾಯಾಲಯವೊಂದು 1991ರಲ್ಲಿ ಸ್ವಾಮಿ ಮರು ನೇಮಕಕ್ಕೆ ಸೂಚಿಸಿತ್ತು. ತಮ್ಮನ್ನು ವಜಾಗೊಳಿಸಿದ್ದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದ ಸ್ವಾಮಿ, ಈ ಅವಧಿಯಲ್ಲಿ ತಮಗೆ ಬರಬೇಕಿದ್ದ ಬಾಕಿ ವೇತನವನ್ನು ನೀಡುವಂತೆ ಒತ್ತಾಯಿಸಿದ್ದರು. ಬಾಕಿ ಉಳಿದಿದ್ದ 20 ವರ್ಷಗಳ ಸಂಬಳವನ್ನು ಅವರು ಸುಮಾರು 28 ವರ್ಷಗಳ ಬಳಿಕ ಪಡೆದುಕೊಳ್ಳಲಿದ್ದಾರೆ. ಈ ಹಣದ ಮೊತ್ತ ಸುಮಾರು 45 ಲಕ್ಷ ರೂಪಾಯಿ.
 ’47 ವರ್ಷಗಳ ಬಳಿಕ ಸಾಕೇತ್ ಕೋರ್ಟ್‌ನಲ್ಲಿ ಐಐಟಿ ದೆಹಲಿ ನನಗೆ ಸೋತಿದೆ. ಶೇ 8ರ ವಾರ್ಷಿಕ ಬಡ್ಡಿದರದಲ್ಲಿ ನನ್ನ ವೇತನದ ಮೊತ್ತವನ್ನು ಪಾವತಿಸಬೇಕಿದೆ. ಇದು ಶೈಕ್ಷಣಿಕ ಜಗತ್ತಿನಲ್ಲಿರುವ ಎಲ್ಲ ಖದೀಮರಿಗೆ ಉದಾಹರಣೆಯಾಗಲಿ’ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button