Belagavi NewsBelgaum NewsKarnataka NewsPolitics

*ಹಂಗರಗಾದಲ್ಲಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸೋಹಳಾ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹಂಗರಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಂಪ್ರದಾಯಿಕ ಪಾರಾಯಣ ಸೋಹಳಾ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿ, ದೇವರ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನೇಶ್ವರಿಯ ಪವಿತ್ರ ಶ್ಲೋಕಗಳು ಹಾಗೂ ತತ್ವಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಲಿ. ಸಮಾಜದಲ್ಲಿ ಪ್ರೀತಿ, ಶಾಂತಿ, ಐಕ್ಯತೆ ಹಾಗೂ ಧರ್ಮಪ್ರಜ್ಞೆ ಹೆಚ್ಚಾಗಿ, ಎಲ್ಲರೂ ಸೌಹಾರ್ದದಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದರು.


ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಪೂಜ್ಯರು, ಸಮಿತಿ ಪದಾಧಿಕಾರಿಗಳು, ಹಂಗರಗಾ ಗ್ರಾಮದ ಹಿರಿಯರು, ತಾಯಂದಿರು ಹಾಗೂ ಯುವಕ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು. ಮಹಾಪ್ರಸಾದ ಸ್ವೀಕರಿಸಿದ ಪ್ರತಿಯೊಬ್ಬರ ಜೀವನದಲ್ಲೂ ಭಗವಂತನ ಕೃಪೆ ಸದಾ ಇರಲಿ ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಯುವರಾಜ ಕದಂ, ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ಬಾಳು ಪಾಟೀಲ, ವಿಷ್ಣು ಸೋನಲಕರ್, ಅರ್ಜುನ ಪಾಟೀಲ, ಮೀನಾ ಗೋಡ್ಸೆ, ಸಹದೇವ್ ಸಾವಂತ, ನಿವೃತ್ತಿ ತಳವಾರ, ಯಲ್ಲಪ್ಪ ಪಾಟೀಲ, ರಘು ಖಂಡೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button