Latest

ಹಳ್ಳೂರಲ್ಲಿ ಆಕಸ್ಮಿಕ ಬೆಂಕಿ ಅವಘಡ, ಗುಡಿಸಲು ಭಸ್ಮ, 11 ಜಾನುವಾರುಗಳು ಬೆಂಕಿಗೆ ಆಹುತಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಹಳ್ಳೂರ ಗ್ರಾಮದ ಸಪ್ತಸಾಗರ ತೋಟದಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ೯ ಎಮ್ಮೆಗಳು ಮತ್ತು ೨ ಆಕಳು ಜೀವಂತವಾಗಿ ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ.
ಬಾಬು ಪಾರೀಶ ಸಪ್ತಸಾಗರ ಎಂಬುವರಿಗೆ ಸೇರಿದ ಗುಡಿಸಲು ಹಾಗೂ ೪ ಎಮ್ಮೆಗಳು ಮತ್ತು ಭರಮಪ್ಪ ಜಿನ್ನಪ್ಪ ಸಪ್ತಸಾಗರ ಅವರ ೨ ಎಮ್ಮೆ, ೨ ಆಕಳು ಮತ್ತು ಧನಪಾಲ ಜಿನ್ನಪ್ಪ ಸಪ್ತಸಾಗರ ಎಂಬುವರ ೩ ಎಮ್ಮೆಗಳು, ಲಕ್ಷಾಂತರ ಮೌಲ್ಯದ ಹಸುಗಳು ಬೆಂದು ಹೋಗಿವೆ.

ವಿದ್ಯುತ್ ತಂತಿಗಳ ಮೇಲೆ ಕೋತಿಗಳ ಆಟಕ್ಕೆ ತಂತಿಗಳು ಕೂಡಿದ ಘಟನೆಯಿಂದ ಬೆಂಕಿ ಕಿಡಿಗಳು ತಗುಲಿ ಗುಡಿಸಲು ಸಂಪೂರ್ಣ ಭಸ್ಮವಾಗಿ, ಹಸುಗಳು ಬೆಂಕಿಗೆ ಆಹುತಿಯಾಗಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಳ್ಳೂರ ಗ್ರಾಮದ ವಿದ್ಯುತ್ ಇಲಾಖೆಯ ಅಧಿಕಾರಿ ಸಿ.ಬಿ.ಒಂಟಗೋಡಿ ಘಟನಾ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ ಎಚ್.ವೈ.ತಾಳಿಕೋಟಿ ಹಾಗೂ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕತ್ತಿ, ಬಳೇಶ ನೇಸೂರ ಇವರು ಹಾನಿಯಾದ ರೈತರಿಗೆ ೨೦,೦೦೦ ರೂಪಾಯಿ ಸಹಾಯ ಧನ ನೀಡುವುದಾಗಿ ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ವಾಸಂತಿ ಹಣಮಂತ ತೇರದಾಳ ಇವರು ವಯಕ್ತಿಕವಾಗಿ ೧೦೦೦೦ ರೂಪಾಯಿ ಸಹಾಯ ಧನ ನೀಡುವುದಾಗಿ ಹೇಳಿದರು.
ಘಟನಾ ಸ್ಥಳಕ್ಕೆ ಹಳ್ಳೂರ ಪಶು ವೈದ್ಯಾಧಿಕಾರಿ ವಿಶ್ವನಾಥ ಹುಕ್ಕೇರಿ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಕಂದಾಯ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಹಾನಿಯಾದ ರೈತರಿಗೆ ಸಹಾಯ ಧನ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ವಿದ್ಯುತ್ ಇಲಾಖೆಯ ಮೇಲಾಧಿಕಾರಿ ಎಮ್ ಎಸ್ ನಾಗನ್ನವರ ಮಾತನಾಡಿ, ಅಗ್ನಿ ದುರಂತವನ್ನು ಪರಿಶೀಲಿಸಿ ರೈತರಿಗೆ ಬರುವ ಸಹಾಯ ಧನವನ್ನು ನೀಡಲಾಗುವುದು ಎಂದು ಹೇಳಿದರು.

Home add -Advt

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೂ ಶೇರ್ ಮಾಡಿ)

Related Articles

Back to top button