ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತೋಂಟದ ಡಾ.ಸಿದ್ದರಾಮ ಸ್ವಾಮಿಗಳನ್ನು ಬೆಳಗಾವಿಯಲ್ಲಿ ಬುಧವಾರ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ಶಿವಗಂಗಾ ಕ್ಷೇತ್ರದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಸತ್ಕರಿಸಿದರು.
ಪುಸ್ತಕದ ಸ್ವಾಮಿಗಳೆಂದೇ ಖ್ಯಾತರಾದ ಡಾ.ಸಿದ್ಧರಾಮ ಸ್ವಾಮಿಗಳ ಕಾರ್ಯದಕ್ಷತೆಯನ್ನು ಶ್ಲಾಘಿಸಿದ ಉಭಯ ಶ್ರೀಗಳು ಅವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.
ಉತ್ತರದ ಹುಕ್ಕೇರಿ ಹಾಗೂ ದಕ್ಷಿಣದ ಶಿವಗಂಗಾ ಸೇರಿ ಅಖಂಡ ಕರ್ನಾಟಕದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಡಾ.ಸಿದ್ಧರಾಮ ಸ್ವಾಮಿಗಳನ್ನು ಸತ್ಕರಿಸಿದ್ದಾಗಿ ಇಬ್ಬರೂ ಸ್ವಾಮಿಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ