Kannada News

ವಿಜಯಪುರ: ಪ್ರೇಯಸಿ ಎದುರೇ ಪ್ರಿಯಕರನ ಕೊಚ್ಚಿ ಕೊಂದರು

ಪ್ರಗತಿವಾಹಿನಿ ಸುದ್ದಿ, ವಿಜಯಪುರ – ಅನ್ಯಕೋಮಿನ ಯುವತಿಯ ಪ್ರೀತಿಸಿದ್ದ ಯುವಕನನ್ನು ಕೊಚ್ಚಿ ಕೊಂದು ಹಾಕಿದ ಘಟನೆ ವಿಜಯಪುರದ ಆಲಮೇಲದಲ್ಲಿ ನಡೆದಿದೆ.

ರವಿ ಎನ್ನುವ 31 ವರ್ಷದ ಯುವಕ ಕೊಲೆಯಾದಾತ. ಈತ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಯುವತಿಯ ಕಡೆಯವರೇ ಆತನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರೇಯಸಿ ಎದುರೇ ಅಟ್ಟಾಡಿಸಿ ಕೊಚ್ಚಿ ಕೊಂದು ಹಾಕಿದ್ದಾರೆ.  ಕೊಲೆಯ ನಂತರ ಶವವನ್ನೂ ಅವರೇ ಹೊತ್ತೊಯ್ದಿದ್ದಾರೆ.

ನಂತರ ಯುವತಿಯೇ ಖುದ್ದಾಗಿ ಯುವಕನ ಮನೆಯವರಿಗೆ ವಿಷಯ ಮುಟ್ಟಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

Our Social media Link’s:

ವೈರಲ್ ಆಯ್ತು ಮೋದಿಯವರ ಅಂದಿನ ಭಾಷಣ

Home add -Advt

Related Articles

Back to top button