Kannada NewsKarnataka NewsLatest
*ವಿಮಾನ ಹಾರಾಟದ ವೇಳೆ ರನ್ ವೇಗೆ ನುಗ್ಗಿದ ಬೀದಿನಾಯಿಗಳು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಏರ್ ಪೋರ್ಟ್ ನಲ್ಲಿಯೂ ಬೀದಿನಾಯಿಗಳ ಹಾವಳಿಗೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಾಗಿದೆ. ವಿಮಾನಗಳ ಹಾರಾಟದ ವೇಳೆಯೇ ಬೀದಿನಾಯಿಗಳು ರನ್ ವೇಗೆ ನುಗ್ಗಿದ ಘಟನೆ ನಡೆದಿದೆ.
ಏರ್ ಪೋರ್ಟ್ ನ ಟರ್ಮಿನಲ್ 2 ರಲ್ಲಿ ಈ ಘಟನೆ ನಡೆದಿದೆ. ಎರಡು ಬೀದಿನಾಯಿಗಳು ರನ್ ವೇಗೆ ನುಗ್ಗಿವೆ. ಬೀದಿನಾಯಿಗಳು ನುಗ್ಗಿದ್ದನ್ನು ಗಮನಿಸಿದ ಏರ್ ಪೋರ್ಟ್ ಸಿಬ್ಬಂದಿಗಳು ತಕ್ಷಣ ಅಲರ್ಟ್ ಆಗಿದ್ದಾರೆ.
ಕೂಡಲೇ ಬೀದಿನಾಯಿಗಳನ್ನು ಸೆರೆ ಹಿಡಿದಿದ್ದಾರೆ. ರನ್ ವೇನಲ್ಲಿ ವಿಮಾನ ಇರಲಿಲ್ಲವಾದ್ದರಿಂದ ಅನಾಹುತ ತಪ್ಪಿದಂತಾಗಿದೆ. ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಭದ್ರತಾ ಲೋಪವಾಗಿದೆ ಎಂದು ತಿಳಿದುಬಂದಿದೆ.




