Latest

ಅಂತೂ ಬಂತು ಕೃಷ್ಣಾ ನದಿಗೆ ನೀರು

ಪ್ರಗತಿವಾಹಿನಿ ಸುದ್ದಿ, ಮಾಂಜರಿ

ಕೃಷ್ಣಾ ನದಿಗೆ ಅಂತೂ ನೀರು ಹರಿದಿದೆ.

 

ಭಾನುವಾರ ಮಹಾರಾಷ್ಟ್ರದಿಂದ ಸುಮಾರು 900 ಕ್ಯುಸೆಕ್ ನೀರು ಬಿಡಲಾಗಿದ್ದು, ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನ ಕೆಲವು ಹಳ್ಳಿಗಳಿಗೆ ಕುಡಿಯುವುದಕ್ಕೆ ಉಪಯೋಗವಾಗಲಿದೆ.

ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದರಿಂದ ನದಿ ತೀರದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜನರು ತೀವ್ರ ಪರದಾಡುತ್ತಿದ್ದಾರೆ. ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನೀರು ಬಿಡುವಂತೆ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಳಗಾವಿಗೆ ಬಂದಿದ್ದಾಗ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪೋನ್ ಮಾಡಿಸಿದ್ದರು. ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ತಕ್ಷಣ ಮಹಾರಾಷ್ಟ್ರ ಸಂಪರ್ಕಿಸಿ ನೀರು ಬಿಡಿಸುವಂತೆ ಕೋರಿದ್ದರು. 

ಇದೀಗ ಸ್ವಲ್ಪ ಪ್ರಮಾಣದಲ್ಲಿ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದೆ. ಆದರೆ ನದಿ ಸಂಪೂರ್ಣ ಒಣಗಿ ನಿಂತಿದ್ದರಿಂದ ಬಹುತೇಕ ನೀರು ಆರಿ ಹೋಗಬಹುದೆನ್ನುವ ಆತಂಕವಿದೆ. ಒಂದಿಷ್ಟು ಪ್ರಮಾಣ ಭಾನುವಾರ ಹರಿದುಬಂದಿದ್ದು,  ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನ ಕೆಲವು ಹಳ್ಳಿಗಳಿಗೆ ಕುಡಿಯುವುದಕ್ಕೆ ಉಪಯೋಗವಾಗಲಿದೆ. 

ಇವುಗಳನ್ನೂ ಓದಿ –

ಶೀಘ್ರ ಕೋರೆ ನೇತೃತ್ವದಲ್ಲಿ ಮಹಾರಾಷ್ಟ್ರ ಸಿಎಂ ಭೇಟಿ -ಕವಟಗಿಮಠ

ಕೊಯ್ನಾದಿಂದ ನೀರು: ಮಹಾ ಸಿಎಂಗೆ ವೆಂಕಯ್ಯ ನಾಯ್ಡು ಸೂಚನೆ -ಕೋರೆ ಮಾಹಿತಿ

ನೀರು ಬಿಡದಿದ್ದರೆ ಮೇ 2ರಂದು ಚಿಕ್ಕೋಡಿ -ಸಾಂಗ್ಲಿ ಹೆದ್ದಾರಿ ತಡೆ

ಪ್ರತಿವರ್ಷ ಕೃಷ್ಣಾ ನದಿಗೆ ಕೊಯ್ನಾ ನೀರು: ಫಡ್ನವೀಸ್ ಗೆ ಕೋರೆ ನೇತೃತ್ವದ ನಿಯೋಗ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button