Latest

ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರಯುತ ಜೀವನದ ಮೌಲ್ಯ ಕಲಿಸುವುದು ಅವಶ್ಯ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
 ಮಗುವಿಗೆ ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರಯುತ ಜೀವನದ ಮೌಲ್ಯಗಳನ್ನು ಕಲಿಸುವುದು ಅತ್ಯವಶ್ಯಕವಾಗಿದೆ. ಅಂದಾಗ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುವುದು. ಎಂದು ಮೂಡಲಗಿ ಬಿ.ಇ.ಒ ಅಜೀತ ಮನ್ನಿಕೆರಿ ಹೇಳಿದರು.
  ಅವರು ಸಮೀಪದ ಅಡಿಬಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಾಥಮಿಕ ಶಿಕ್ಷಣವು ಮಗುವಿನ ತಳಪಾಯವಾಗಿದ್ದು, ಬುನಾದಿ ಗಟ್ಟಿಯಾದರೆ ಮಾತ್ರ ಮಕ್ಕಳ ಭವ್ಯ ಭವಿಷ್ಯತ್ತನ್ನು ನಿರ್ಮಿಸಲು ಸಾಧ್ಯವಾಗುವದು. ಮಗುವನ್ನು ಕೇವಲ ಕಲಿಕೆಗಷ್ಟೆ ಸೀಮಿತವಾಗಿರಿಸದೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಜೀವನದ ಮೌಲ್ಯಗಳನ್ನು ರೂಡಿಸಬೇಕು. ಶಿಕ್ಷಕರು ತಮ್ಮ ತರಗತಿಗಳ ಮಕ್ಕಳಿಗೆ ಪೂರಕವಾಗುವ ಕಲಿಕಾ ವಾತಾವರಣ ನಿರ್ಮಿಸಬೇಕು. ಪಾಲಕರು ಚುನಾಯಿತ ಪ್ರತಿನಿಧಿಗಳು ಕೂಡ ಶೈಕ್ಷಣಿಕವಾಗಿ ಬೇಕಾಗುವ ಮೂಲಭೂತ ಸೌಲಭ್ಯಗಳು ಹಾಗೂ ಇನ್ನಿತರ ಕಲಿಕಾ ಸಾಧನ ಸಲಕರಣೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶಾಲೆಯ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ವಿನಂತಿಸಿದರು.
   ಕಾರ್ಯಕ್ರಮದಲ್ಲಿ ಬಿ.ಆರ್.ಪಿ. ಕೆ.ಎಲ್ ಮೀಶಿ, ಸಿ.ಆರ್.ಪಿ ಡಿ.ಎಮ್ ಬೋಳೆತ್ತಿನ, ಪ್ರಧಾನ ಗುರು ವಿ.ಎಮ್ ರಾಜೇಖಾನ, ಸರಕಾರಿ ನೌಕರ ಸಂಘದ ಉಪಾಧ್ಯಕ್ಷ ಎಮ್.ಜಿ ಮಾವಿನಗಿಡದ, ಎಸ್.ಎಸ್ ಪವಾಡಿಗೌಡರ, ಎಸ್.ಬಿ ಚೌದರಿ, ಎಸ್.ಎಚ್ ಹರಿಜನ, ಐ.ಪಿ ಕಡಕೋಳ, ಎಸ್.ಎಮ್ ಕಬ್ಬಲಗಿ, ಕಾಳಮ್ಮ ಇಟ್ನಾಳ ಹಾಗೂ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button