ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡಯುತ್ತಿರುವ ವಿಧಾನಮಂಡಳದ ಚಳಿಗಾಲದ ಅಧಿವೇಶನ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಾಟಾಳ್ ನಾಗರಾಜ್ ಬುಧವಾರ ಸುವರ್ಣವಿಧಾನಸೌಧದ ಎದುರು ಜೋಳದ ರೊಟ್ಟಿ, ಶೇಂಗಾ ಚಟ್ನಿ ವಿತರಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಅವರು ಪ್ರತಿಭಟನೆ ನಡೆಸುವರು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಯಾಗಬೇಕು. ಹೈದರಾಬಾದ್ ಕರ್ನಾಟಕ ಬೆಳವಣಿಗೆಯಾಗಬೇಕು. ವಿಷಪ್ರಾಸನದಿಂದ ಸತ್ತವರ ಕುಟುಂಬಕ್ಕೆ ತಲಾ 15 ಲಕ್ಷ ರೂ. ನೀಡಬೇಕು ಎನ್ನುವುದು ವಾಟಾಳ ್ ಬೇಡಿಕೆಯಾಗಿದೆ. ಬೆಳಗಾವಿ ಅಧಿವೇಶನ ಸಂಪೂರ್ಣ ವಿಫಲವಾಗಿದೆ. ಇನ್ನು ಒಂದೆರಡು ದಿನದಲ್ಲಿ ಎಲ್ಲರೂ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಾರೆ. ಸುವರ್ಣ ವಿಧಾನಸೌಧ ಮತ್ತೆ ಕತ್ತಲೆಯಕೂಪವಾಗಲಿದೆ. ಯಾವುದೇ ಸಮಗ್ರ ಚರ್ಚೆ ಇಲ್ಲಿ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ