Latest

ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಆರನೇ ವಾರ್ಷಿಕ ಮಹೋತ್ಸವ ಮೇ ೨೩, ೨೪, ೨೫ ರಂದು ನಡೆಯಲಿದೆ.
ಮೇ ೨೩ ರಂದು ಬೆಳಗ್ಗೆ ೫ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಗಂಗಾಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಚನ, ಗಣಹೋಮ, ಲಘು ರುದ್ರಾಭಿಷೇಕ, ನವಗ್ರಹ ಪೂಜೆ, ಮಂಟಪ ಪೂಜೆ, ಅಲಂಕಾರ ಪೂಜೆ, ಮಂಗಳಾರತಿ, ವಿಶೇಷ ಅಲಂಕಾರ, ಸಂಜೆ ೪ ಕ್ಕೆ ಭಜನೆ, ಸಂಜೆ ೬ ಕ್ಕೆ ಸುದರ್ಶನ ಹೋಮ ನಡೆಯಲಿದೆ.
ಮೇ ೨೪ ರಂದು ಬೆಳಗ್ಗೆ ೫ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ರುದ್ರ ಹೋಮ, ದಿಗ್ಭಂಧನ ಹೋಮ, ಕುಂಕುಮಾರ್ಚನೆ, ಮಂಗಳಾರತಿ, ವಿಶೇಷ ಅಲಂಕಾರ, ಸಂಜೆ ೪ ಕ್ಕೆ ದೇವಿಯ ಪಲ್ಲಕಿ ಉತ್ಸವ, ಬಲಿ ಉತ್ಸವ, ರಾತ್ರಿ ೮ ಕ್ಕೆ ದೀಪೋತ್ಸವ, ರಂಗಪೂಜೆ ನಡೆಯಲಿದೆ.
ಮೇ ೨೫ ರಂದು ಬೆಳಗ್ಗೆ ೫ ರಿಂದ ಮಧ್ಯಾಹ್ನ ೧೨ ರ ವರೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಬೆಳಗ್ಗೆ ೯ ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಉಡಿ ತುಂಬುವ ಕಾರ್ಯಕ್ರಮ, ವಿಶೇಷ ಅಲಂಕಾರ, ಮಧ್ಯಾಹ್ನ ೧೨ ಕ್ಕೆ ಮಹಾಪ್ರಸಾದ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಮೊಕ್ತೇಸರ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button