ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ತಾಲೂಕಿನ ಅವರಗೋಳ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ ಮಾಡಲಾಗಿದೆ.
ಜನವರಿ 23ರ ಸಂಜೆ ಕರಗುಪ್ಪಿ ಕುಟುಂಬದವರು ಮಾರಕಾಸ್ತ್ರಗಳೊಂದಿಗೆ ಬಾಲಕಿಯ ಮನೆಗೆ ನುಗ್ಗಿ ಕುಟುಂಬದವರ ಮೇಲೆ ಹಲ್ಲೆ ಮಾಡಿ ಬಾಲಕಿಯನ್ನು ಅಪಹರಿಸಿ ಅದೇ ದಿನರಾತ್ರಿ ಶಿವಲಿಂಗ ಕರಗುಪ್ಪಿ ಎಂಬುವವನು ಅತ್ಯಾಚಾರ ಎಸೆಗಿದ್ದಾನೆಂದು ಬಾಲಕಿಯ ತಾಯಿ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಿವಲಿಂಗ ಶಿವರುದ್ರ ಕರಗುಪ್ಪಿ, ಶಿವರುದ್ರ ಬಾಳಪ್ಪಾ ಕರಗುಪ್ಪಿ, ಕೆಂಪಣ್ಣಾ ಬಾಳಪ್ಪಾ ಕರಗುಪ್ಪಿ ಈ ಮೂವರು ಮೇಲೆ (ಭಾರತೀಯ ದಂಡ ಸಂಹಿತೆ ಪ್ರಕಾರ ೪೪೮, ೫೦೪,೩೨೪, ೩೪೧, ೩೫೪ (ಅ) ೩೭೬) ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ
ಶಿವಲಿಂಗ ಈ ಬಾಲಕಿಯನ್ನು ಪ್ರೀತಿಸುತ್ತಿದ್ದ ಹಾಗೂ ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದ. ಆದರೆ ಬಾಲಕಿಯ ಕುಟುಂಬದವರು ಈ ಮದುವೆಗೆ ಒಪ್ಪದ ಕಾರಣ ಶಿವಲಿಂಗ ಕರಗುಪ್ಪಿ ಕುಟುಂಬದವರು ಬಾಲಕಿಯ ಕುಟುಂಬದವರ ಮೇಲೆ ಹಲ್ಲೆ ಮಾಡಿ ಬಾಲಕಿಯನ್ನು ಅಪಹಿರಿಸಿ ಅತ್ಯಾಚಾರ ಮಾಡಿದ್ದಾರೆ ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ