Latest

ಅಮೇಥಿಯಲ್ಲಿ ರಾಹುಲ್ ಗೆ ಭಾರಿ ಸಂಕಷ್ಟ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: 

ಇಂಗ್ಲೆಂಡ್ ಕಂಪನಿಯೊಂದರ ನೊಂದಣಿ ವೇಳೆ ರಾಹುಲ್ ಗಾಂಧಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಾವು ಬ್ರಿಟೀಶ್ ಪೌರತ್ವ ಪಡೆದಿರುವುದಾಗಿ  ಉಲ್ಲೇಖಿಸಿದ್ದು, ಅವರ ನಾಮಪತ್ರ ತಿರಸ್ಕರಿಸಬೇಕೆಂದು ಅಮೇಥಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಧ್ರುವಲಾಲ್ ಎನ್ನುವವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮೇಥಿಯ ನಾಮಪತ್ರ ಪರಿಶೀಲನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲ ಎಂದಾದ ಮೇಲೆ, ರಾಹುಲ್ ಗಾಂಧಿ ನಾಮಪತ್ರ ಸ್ವೀಕಾರಾರ್ಹವಲ್ಲ ಎಂದು ಪಕ್ಷೇತರ ಅಭ್ಯರ್ಥಿ ಧ್ರುವ ಲಾಲ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

Home add -Advt

ಹಾಗಾಗಿ ನಾಮಪತ್ರ ಪರಿಶೀಲನೆಯನ್ನು ಮುಂದೂಡಲಾಗಿದ್ದು, ರಾಹುಲ್ ಗಾಂಧಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ ಎದುರಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button